Select Your Language

Notifications

webdunia
webdunia
webdunia
webdunia

ಅತ್ಯದ್ಭುತ ವಿಶೇಷಗಳೊಂದಿಗೆ ಎಂಐ ಹೊಸ ಫೋನ್

ಅತ್ಯದ್ಭುತ ವಿಶೇಷಗಳೊಂದಿಗೆ ಎಂಐ ಹೊಸ ಫೋನ್
New Delhi , ಶುಕ್ರವಾರ, 24 ಫೆಬ್ರವರಿ 2017 (12:40 IST)
ಚೀನಾ ಮೊಬೈಲ್ ದಿಗ್ಗಜ ಎಂಐನಿಂದ ಮ್ಯಾಕ್ಸ್ 2 ಹೆಸರಿನ ಹೊಸ ಫೋನ್ ಮಾರುಕಟ್ಟೆಗೆ ದಾಂಗುಡಿ ಇಡಲಿದೆ. 5,000 ಎಂಎಎಚ್ ಬ್ಯಾಟರಿ ಸಾಮರ್ಥ್ಯ, 128 ಜಿಬಿ ಆಂತರಿಕ ಮೆಮೊರಿ, ವೇಗವಾಗಿ ಕಾರ್ಯನಿರ್ವಹಿಸಲು ಕ್ವಾಲ್ಕಮ್ ಸ್ನಾಪ್‌ಡ್ರ್ಯಾಗನ್ 660 ಪ್ರೋಸೆಸರ್, 6ಜಿಬಿ ರ‍್ಯಾಮ್‌‍ನೊಂದಿಗೆ ಬರಲಿದೆ. 
 
ಇಷ್ಟೆಲ್ಲಾ ವಿಶೇಷಗಳುಳ್ಳ ಫೋನ್‍ ಸ್ಟಕ್ ಆಗುತ್ತದೆ ಎಂಬ ಮಾತೇ ಇಲ್ಲ. ಮಲ್ಟಿ ಟಾಸ್ಕಿಂಗ್, 3ಡಿ ಗೇಮ್ಸ್ ಸುಲಭವಾಗಿ ಬಳಸಿಕೊಳ್ಳಬಹುದು. ಹೈ ಗಾಫಿಕ್ಸ್ ಆಪ್ಸ್ ಸಹ ಕೂಡಲೆ ಕೆಲಸ ಮಾಡುವಂತೆ ಬಳಸಿಕೊಳ್ಳಬಹುದು. ಇದು 6.44 ಇಂಚಿನಷ್ಟು ಇರಲಿದೆ.
 
ಎಂಐ ಫೋನ್ ಮಾರುಕಟ್ಟೆ ಬಿಡುಗಡೆಯಾಗುತ್ತಿದೆ ಎಂದರೆ ಕ್ಷಣ ಮಾತ್ರದಲ್ಲಿ ಲಕ್ಷ ಫೋನ್‌ಗಳು ಮಾರಾಟವಾಗುತ್ತವೆ. ಆಕರ್ಷಕವಾಗಿ, ವಿಶೇಷತೆಗಳೊಂದಿಗೆ ಬರುತ್ತಿರುವ ಮ್ಯಾಕ್ಸ್ 2 ಏನೆಲ್ಲಾ ದಾಖಲೆ ಮಾಡಲಿದೆ ಎಂಬುದನ್ನು ಕಾದುನೋಡಬೇಕು. ಇದರ ಬೆಲೆ ರೂ.20,000ದವರೆಗೂ ಇರಲಿದೆ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೆನೋ ಹೊಸ ಕ್ವಿಡ್ ಆರಂಭಿಕ ಬೆಲೆ ರೂ.3.54 ಲಕ್ಷ