Select Your Language

Notifications

webdunia
webdunia
webdunia
webdunia

ಮೊಬೈಲ್ ಬಳಕೆಯಲ್ಲೂ ಮಹಿಳೆಯರದ್ದೇ ಮೇಲುಗೈ

ಮೊಬೈಲ್ ಬಳಕೆಯಲ್ಲೂ ಮಹಿಳೆಯರದ್ದೇ ಮೇಲುಗೈ
New Delhi , ಗುರುವಾರ, 22 ಡಿಸೆಂಬರ್ 2016 (10:38 IST)
ನಮ್ಮ ದೇಶದ ಮಹಿಳೆಯರು ಸಾಮಾನ್ಯವಾಗಿ ಕಾಲಹರಣ ಮಾಡಲು ಸುಲಭವಾಗಿ ಆಯ್ಕೆ ಮಾಡಿಕೊಳ್ಳುವ ದಾರಿ ಎಂದರೆ ಟಿವಿ. ಗಂಟೆಗಟ್ಟಲೆ ಟಿವಿ ಸೀರಿಯಲ್‌ಗಳಲ್ಲೇ ಮುಳುಗುವವರ ಸಂಖ್ಯೆಗೇನು ಬರವಿಲ್ಲ. 
 
ಆದರೆ ಇತ್ತೀಚೆಗೆ ಮೊಬೈಲ್ ಮಾರುಕಟ್ಟೆ ಒಕ್ಕೂಟ ನಡೆಸಿದ ಸಮೀಕ್ಷೆಯಲ್ಲಿ ಕೆಲವೊಂದು ಆಸಕ್ತಿಕರ ವಿಚಾರಗಳು ಹೊರಬಂದಿವೆ. ಇದರ ಪ್ರಕಾರ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಸ್ಮಾರ್ಟ್‍ಫೋನ್ ಬಳಸುತ್ತಿದ್ದಾರಂತೆ.
 
ಟಿವಿ ನೋಡುವ ಸಮಯಕ್ಕಿಂತ ವಿಡಿಯೋ ಗೇಮ್ಸ್ ಆಡುವುದು, ಯೂಟ್ಯೂಬ್ ವೀಕ್ಷಿಸುವ ಕೆಲಸಗಳಲ್ಲಿ ಬಿಜಿಯಾಗಿದ್ದಾರಂತೆ ಎಂದು ಸಮೀಕ್ಷೆ ಹೇಳಿದೆ. ಭಾರತದಲ್ಲಿನ ಗ್ರಾಹಕರು ಒಟ್ಟಾರೆ ಮೂರು ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಇದು 2015ನೇ ಸಾಲಿಗೆ ಹೋಲಿಸಿದರೆ ಶೇ.55ರಷ್ಟು ಅಧಿಕ. ಇದರಲ್ಲಿ ಸಾಮಾಜಿಕ ಮಾಧ್ಯಮ, ಮೆಸೇಜ್ ಆಪ್‌ಗಳದ್ದೇ ಸಿಂಹಪಾಲು. 
 
ಇನ್ನು ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸುಮಾರು ಎರಡರಷ್ಟು ಸಮಯವನ್ನು ಗೇಮ್ಸ್, ಯೂಟ್ಯೂಬ್‌ಗೆ ವ್ಯಯಿಸುತ್ತಿದ್ದಾರೆ ಎನ್ನುತ್ತದೆ ಸಮೀಕ್ಷೆ. ಇನ್ನೂ ಶೇ.85ರಷ್ಟು ಮಂದಿಗೆ ಸ್ಮಾರ್ಟ್‌ಫೋನ್‍ಗೆ ಬದಲಾಗಲು ಇಷ್ಟವಿಲ್ಲವಂತೆ. ಫ್ಯೂಚರ್ ಫೋನ್‌ಗಳಲ್ಲಿ ಬ್ಯಾಟರಿ ಬಾಳಿಕೆ, ಕಡಿಮೆ ರಿಪೇರಿ, ರಿಪೇರಿ ಮಾಡಿಕೊಳ್ಳುವ ಅವಕಾಶ ಇರುವ ಕಾರಣ ಅವರು ಸ್ಮಾರ್ಟ್‍ಫೋನ್ ಬಯಸುತ್ತಿಲ್ಲ ಎನ್ನುತ್ತದೆ ಸಮೀಕ್ಷೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸದ ಸಮಯದಲ್ಲಿ ಮನೆ ಸುರಕ್ಷತೆಯ ಕುರಿತು ಭಯವೇ? ಇನ್ನು ಭಯಪಡಬೇಕಿಲ್ಲ.....