Publish Date: Wed, 12 Sep 2018 (09:43 IST)
Updated Date: Wed, 12 Sep 2018 (09:44 IST)
ನವದೆಹಲಿ: ರಿಲಯನ್ಸ್ ಬಿಡುಗಡೆಗೊಳಿಸಿದ್ದ ಅಗ್ಗದ ದರದ ಜಿಯೋ ಫೋನ್ ಗಳಲ್ಲಿ ವ್ಯಾಟ್ಸಪ್ ಇಲ್ಲ ಎಂದು ಕೊರಗುತ್ತಿದ್ದವರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ.
ಇನ್ನು ಮುಂದೆ ಜಿಯೋ ಫೋನ್ ಗಳಲ್ಲೂ ವ್ಯಾಟ್ಸಪ್ ಲಭ್ಯವಾಗಲಿದೆ. ರಿಲಯನ್ಸ್ ಬಿಡುಗಡೆಗೊಳಿಸಿದ್ದ ಜಿಯೋ ಫೋನ್ 1 ಮತ್ತು ಜಿಯೋ ಫೋನ್ 2 ಎರಡರಲ್ಲೂ ವ್ಯಾಟ್ಸಪ್ ಲಭ್ಯವಾಗಲಿದೆ.
ಸೆಪ್ಟೆಂಬರ್ 10 ರಿಂದ ಈ ಸೌಲಭ್ಯ ಜಾರಿಯಾಗುವಂತೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಜಿಯೋ ಫೋನ್ ಆಪ್ ಸ್ಟೋರ್ ನಿಂದ ವ್ಯಾಟ್ಸಪ್ ನ್ನು ನಿಮ್ಮ ಫೋನ್ ಗೆ ಡೌನ್ ಲೋಡ್ ಮಾಡಿಕೊಂಡು ಬಳಿಕ ನಿಮ್ಮ ಫೋನ್ ನಂಬರ್ ವೆರಿಫೈ ಮಾಡಿದರೆ ಸಾಕು. ಯಾವುದೇ ವ್ಯಾಟ್ಸಪ್ ಬಳಕೆದಾರರ ಜತೆಗೆ ನೀವು ಚಾಟಿಂಗ್ ಮಾಡಬಹುದು ಎಂದು ಸಂಸ್ಥೆ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.