ಒಂದು ವೇಳೆ, ಗ್ರಾಹಕರು ಎಟಿಎಂನಿಂದ ಹಣ ಡ್ರಾ ಮಾಡಿದಾಗ ನಕಲಿ ನೋಟು ದೊರೆತರೆ ಏನು ಮಾಡಬೇಕು ಎನ್ನುವುದು ನಿಮಗೆ ಗೊತ್ತಿದೆಯೇ? ಇಲ್ಲಿದೆ ನಿಮ್ಮ ಪ್ರಶ್ನೆಗೆ ಉತ್ತರ.
ಕಾರ್ಪೋರೇಶನ್ ಬ್ಯಾಂಕ್ ಉದ್ಯೋಗಿ ತಮಿಳರಸನ್ ಎನ್ನುವವರು ಎಟಿಎಂನಿಂದ ಹಣ ಡ್ರಾ ಮಾಡುವಾಗ 27 ನಕಲಿ ನೋಟುಗಳು ದೊರೆತಿವೆ. ಬ್ಯಾಂಕ್ ಉದ್ಯೋಗಿಯಾಗಿದ್ದರಿಂದ ನೋಟುಗಳು ನಕಲಿ ಎನ್ನುವುದು ಸುಲಭವಾಗಿ ಕಂಡು ಹಿಡಿದರು. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಬ್ಯಾಂಕ್ ಹಣವನ್ನು ಮರುಪಾವತಿ ಮಾಡುವುದಾಗಿ ಭರವಸೆ ನೀಡಿತು.
ಆದರೆ, ಬಹುತೇಕ ಸಾಮಾನ್ಯ ಗ್ರಾಹಕರಿಗೆ ಎಟಿಎಂನಿಂದ ನಕಲಿ ನೋಟು ದೊರೆತಲ್ಲಿ ಕಂಗಾಲಾಗುವ ಸ್ಥಿತಿ ಎದುರಾಗುತ್ತದೆ.
ಸೈಬರ್ ಕ್ರೈಮ್ ಪೊಲೀಸರ ಪ್ರಕಾರ, ಗ್ರಾಹಕರಿಗೆ ಒಂದು ವೇಳೆ, ಎಟಿಎಂನಿಂದ ನಕಲಿ ನೋಟು ದೊರೆತಲ್ಲಿ ಎಟಿಎಂನಲ್ಲಿರುವ ಸಿಸಿಟಿವಿ ಕ್ಯಾಮರಾದ ಮುಂದೆ ನೋಟುಗಳನ್ನು ಹಿಡಿಯಬೇಕು. ಒಂದು ವೇಳೆ, ಎಟಿಎಂನಲ್ಲಿ ಸಿಸಿಟಿವಿ ಕಾರ್ಯನಿರ್ವಹಿಸದಿದ್ದರೇ ಅಲ್ಲಿರುವ ಗಾರ್ಡ್ ನೆರವು ಪಡೆದುಕೊಂಡು ಬ್ಯಾಂಕ್‌ಗೆ ದೂರು ನೀಡಬೇಕು. ಒಂದು ವೇಳೆ ನೀವು ಎಟಿಎಂನಿಂದ ಹೊರಬಂದಲ್ಲಿ ನೋಟುಗಳು ಎಟಿಎಂ ಮಷಿನ್‌ನಿಂದಲೇ ತೆಗೆದಿದ್ದು ಎನ್ನುವುದು ಸಾಬೀತುಪಡಿಸುವುದು ಕಷ್ಟವಾಗುತ್ತದೆ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ