Select Your Language

Notifications

webdunia
webdunia
webdunia
webdunia

ಭಾರತ ಮಾರುಕಟ್ಟೆಗೆ ವೋಲ್ವೋ ಹೊಸ ಕಾರು

ಭಾರತ ಮಾರುಕಟ್ಟೆಗೆ ವೋಲ್ವೋ ಹೊಸ ಕಾರು
New Delhi , ಶುಕ್ರವಾರ, 16 ಡಿಸೆಂಬರ್ 2016 (10:42 IST)
ಸ್ವೀಡನ್ ಮೂಲದ ಐಶಾರಾಮಿ ಕಾರು ತಯಾರಿಕಾ ಕಂಪನಿ ವೋಲ್ವೋ ಭಾರತದ ಮಾರುಕಟ್ಟೆಗೆ ಎರಡು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾಡೆಲ್ ಕಾರುಗಳನ್ನು ಬಿಡುಗಡೆ ಮಾಡಿದೆ. ಈಗಾಗಲೆ ಇರುವ ವಿ40, ವಿ40 ಕ್ರಾಸ್ ಕಂಟ್ರಿ ಮಾಡೆಲ್ ಕಾರುಗಳಿಗೆ ಮತ್ತಷ್ಟು ಫೀಚರ್‌ಗಳನ್ನು ಸೇರಿಸಿ ಈ ಪ್ರೀಮಿಯಂ ಕಾರುಗಳನ್ನು ಮಾರುಕಟ್ಟೆಗೆ ತಂದಿದೆ.
 
ದೆಹಲ್ಲಿ ಎಕ್ಸ್‌ಶೋರೂಂ ಬೆಲೆ ರೂ. 25.49 ಲಕ್ಷಗಳಿಂದ ರೂ. 29.4 ಲಕ್ಷಗಳು. ಭಾರತದ ಯುವ ಜನತೆಯನ್ನು ಈ ಎರಡೂ ಕಾರುಗಳು ತುಂಬಾ ಆಕರ್ಷಿಸಲಿವೆ ಎಂದು ವೋಲ್ವೋ ಆಟೋ ಇಂಡಿಯಾ ಎಂಡಿ ಟಾಮ್ ವಾಮ್ ಬಾನ್ಸ್‌ಡಾರ್ಪ್ ತಿಳಿಸಿದ್ದಾರೆ. 
 
ಈ ಎರಡೂ ಆವೃತ್ತಿಗಳಲ್ಲಿ 2 ಲೀಟರ್ ಡೀಸೆಲ್ ಇಂಜಿನ್, ಸಿಕ್ಸ್ ಸ್ಪೀಡ್ ಆಟೋಮೇಟಿಕ್ ಫೋರ್ ವೀಲ್ ಡ್ರೈವ್ ಸೌಲಭ್ಯಗಳಿವೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಕನಿಷ್ಠ ಶೇ.10ರಷ್ಟು ಮಾರುಕಟ್ಟೆ ಪಾಲು ಪಡೆಯುವ ಗುರಿಯೊಂದಿಗೆ ವೋಲ್ವೋ ಮುಂದಡಿಯಿಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಜಾಜ್ ಹೊಸ ಸ್ಫೋರ್ಟ್ಸ್ ಬೈಕ್ ಡೊಮಿನೋರ್ 400