Select Your Language

Notifications

webdunia
webdunia
webdunia
webdunia

ಬಾಜಾಜ್ ಹೊಸ ಸ್ಫೋರ್ಟ್ಸ್ ಬೈಕ್ ಡೊಮಿನೋರ್ 400

ಬಾಜಾಜ್ ಹೊಸ ಸ್ಫೋರ್ಟ್ಸ್ ಬೈಕ್ ಡೊಮಿನೋರ್ 400
New Delhi , ಶುಕ್ರವಾರ, 16 ಡಿಸೆಂಬರ್ 2016 (10:09 IST)
ಬಜಾಜ್ ಆಟೋ ಹೊಸ ಸ್ಫೋರ್ಟ್ಸ್ ಬೈಕ್ ಡೊಮಿನೋರ್ 400 ಮಾಡೆಲನ್ನು ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 1.5 ಲಕ್ಷ (ದೆಹಲಿ ಎಕ್ಸ್‌ಶೋರೂಂ ಬೆಲೆ). ರಾಯಲ್ ಎನ್‍ಫೀಲ್ಡ್‌ನಂತಹ ಕಂಪನಿಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಈ ಬೈಕನ್ನು ಮಾರುಕಟ್ಟೆಗೆ ಬಿಟ್ಟಿದೆ.
 
ಡೊಮಿನೋರ್ 400 ಬೈಕಿನಲ್ಲಿ 373 ಸಿಸಿ ಇಂಜಿನ್ ಇದ್ದು, ಎಬಿಎಸ್, ಡಿಸ್ಕ್ ಬ್ರೇಕ್‌ ಹೊಂದಿರುವ ಎರಡು ಆವೃತ್ತಿಗಳ ಬೆಲೆ ಕ್ರಮವಾಗಿ ರೂ. 1.5 ಲಕ್ಷ ಮತ್ತು ರೂ.1.3 ಲಕ್ಷಗಳು. "ನಮ್ಮ ಕಂಪನಿಯಿಂದ ಬಂದಂತ ಅತ್ಯುತ್ತಮ, ಅತಿದೊಡ್ಡ ಬೈಕ್ ಡೊಮಿನೋರ್. ಈ ಬೈಕ್‌ ಮೂಲಕ ರೂ. 1-2 ಲಕ್ಷಗಳ ಸೆಗ್ಮೆಂಟ್‌ಗೆ ಪ್ರವೇಶಿಸುತ್ತಿದ್ದೇವೆ. ಈ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಪಾಲು ಶೇ. 80ರಷ್ಟಿದೆ" ಎಂದು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
 
ಈ ವಿಭಾಗದಲ್ಲಿನ ಶೇ. 80 ಮಾರುಕಟ್ಟೆ ಪಾಲನ್ನು ಮುಂಬರುವ 12-18 ತಿಂಗಳಲ್ಲಿ ಪಡಯಬೇಕೆಂದಿದ್ದೇವೆ. ಆಗ 100 ಕೋಟಿ ಡಾಲರ್ ಬ್ರಾಂಡ್ ಆಗಿ ಡೊಮಿನೋರ್ 400 ಹೊರಹೊಮ್ಮಲಿದೆ. ಈ ವಿಭಾಗದಲ್ಲಿರುವ ರಾಯಲ್ ಎನ್‍ಫೀಲ್ಡ್ ಕಂಪನಿ ತಿಂಗಳಿಗೆ 65,00-75,00 ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ ಎಂದರು. ಮುಂದಿನ ವರ್ಷ ಈ ಬೈಕನ್ನು ವಿದೇಶಗಳಿಗೂ ರಫ್ತು ಮಾಡಲಿದ್ದೇವೆ. ಡೊಮಿನೋರ್ ಬುಕಿಂಗ್ ಆನ್‌ಲೈನಲ್ಲಿ ಆರಂಭಿಸಿದ್ದು, ಜನವರಿಯಿಂದ ಡೆಲಿವರಿ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ರೂಟ್ಸ್‍ಅಪ್‍ಗೆ ತಾಪ್ಸಿ ಹೊಸ ಪ್ರಚಾರ ರಾಯಭಾರಿ