Select Your Language

Notifications

webdunia
webdunia
webdunia
webdunia

ಸ್ಕೈಪ್ ಸೌಲಭ್ಯದೊಂದಿಗೆ ಬರುತ್ತಿದೆ ವೋಲ್ವೋ ಕಾರು

ಸ್ಕೈಪ್ ಸೌಲಭ್ಯದೊಂದಿಗೆ ಬರುತ್ತಿದೆ ವೋಲ್ವೋ ಕಾರು
New Delhi , ಭಾನುವಾರ, 1 ಜನವರಿ 2017 (13:06 IST)
ಸ್ವೀಡನ್ ಆಟೋಮೊಬೈಲ್ ದಿಗ್ಗಜ ವೋಲ್ವೋ ಕಂಪನಿ ಮೈಕ್ರೋಸಾಫ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸ್ಕೈಪ್ ಫಾರ್ ಬಿಜಿನೆಸ್ ಸೌಲಭ್ಯದೊಂದಿಗೆ 90 ಸೀರಿಸ್ ಕಾರುಗಳನ್ನು ತಯಾರಿಸಲಿದೆ. ಈ ರೀತಿಯ ಸೌಲಭ್ಯ ಇರುವ ಕಾರು ಮಾರುಕಟ್ಟೆಗೆ ಬರುತ್ತಿರುವುದು ಇದೇ ಮೊದಲು.
 
90 ಸೀರಿಸ್‌ನಲ್ಲಿ ಈಗಾಗಲೆ ಎಕ್ಸ್‌ಸಿ 90 ಎಸ್‌ಯುವಿ, ಎಸ್90 ಸೆಡಾನ್, ವಿ90 ಎಸ್ಟೇಟ್, ವಿ90 ಕ್ರಾಸ್‌ಕಂಟ್ರಿಗಳನ್ನು ಉತ್ಪಾದಿಸುತ್ತಿದೆ. ಭಾರತದಲ್ಲಿ ವಿ90 ಕ್ರಾಸ್ ಕಂಟ್ರಿ ಕಾರು 2017ರ ಮಧ್ಯಂತರ ಅವಧಿಯಲ್ಲಿ ಬಿಡುಗಡೆ ಮಾಡಲಿದ್ದಾರೆ.
 
ಸ್ಕೈಪ್ ಫಾರ್ ಬಿಜಿನೆಸ್ ಸೌಲಭ್ಯವುಳ್ಳ ಕಾರು ಕನೆಕ್ಟಿವಿಟಿಯ ಭಾಗವಾಗಿರುತ್ತದೆ. ಇದರಲ್ಲಿ ಸಭೆಯ ವಿವರಗಳು ತಿಳಿದುಕೊಳ್ಳಬಹುದು, ಬಿಜಿನೆಸ್ ಕರೆಗಳನ್ನು ಮಾಡುವ ಸದುಪಾಯ ಇರುತ್ತದೆ. ಈ ಬಗ್ಗೆ ವೋಲ್ವೋ ಕನೆಕ್ಟಿವಿಟಿ ಮುಖ್ಯಸ್ಥ ಮಾತನಾಡುತ್ತಾ, ಕಾರಿನಲ್ಲಿ ಕೂತು ಎಲ್ಲಾ ವಿಧವಾದ ಕರೆಗಳನ್ನು ಮಾಡುವ ಸೌಲಭ್ಯ ಇದರಲ್ಲಿರುತ್ತದೆ. ಇದರಲ್ಲಿ ಉದ್ದುದ್ದ ಪಿನ್‍ಕೋಡ್ ಇರಲ್ಲ. ಸಭೆ, ಸಮಾವೇಶಕ್ಕಾಗಿ ಗಂಟೆಗಟ್ಟಲೆ ಆಫೀಸಲ್ಲಿ ಇರಬೇಕಾಗಿಲ್ಲ. ಕಾರಿನಿಂದಲೇ ಕಚೇರಿ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ ರೂ.144ಕ್ಕೆ ಅನಿಯಮಿತ ಕರೆಗಳು