Publish Date: Mon, 09 Sep 2019 (08:57 IST)
Updated Date: Mon, 09 Sep 2019 (08:59 IST)
ನವದೆಹಲಿ : ರಿಲಾಯನ್ಸ್ ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಗೆ ಟಕ್ಕರ್ ನೀಡಲು ವೊಡಾಫೋನ್ ತನ್ನ 'ಯೂ ಬ್ರಾಡ್ಬ್ಯಾಂಡ್' ಸೇವೆಯಲ್ಲಿ ಬದಲಾವಣೆ ಮಾಡಿದೆ.
ವೊಡಾಫೋನ್ ನ 944 ರೂ. ರಿಚಾರ್ಜ್ ಪ್ಲಾನ್ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ತಿಂಗಳಿಗೆ 100mbps ವೇಗದ ಇಂಟರ್ ನೆಟ್ ಸೇವೆ ನೀಡುತ್ತಿದೆ. ಆದರೆ ಈ ಪ್ಲಾನ್ನಲ್ಲಿ ಅನಿಯಮಿತ ಡೇಟಾ, ಯಾವುದೇ FUP ಲಿಮಿಟ್ ಇರುವುದಿಲ್ಲ.
ಹಾಗೇ ಗ್ರಾಹಕರಿಗಾಗಿ 2,744 ರೂ. ರಿಚಾರ್ಜ್ ಪ್ಲಾನ್ ನ್ನು ಪರಿಚಯಿಸಿದ್ದು, ಇದು 90 ದಿನಗಳವರೆಗೆ ಅನಿಯಮಿತ ಡೇಟಾವನ್ನು ನೀಡಲಿದೆ. ಅಲ್ಲದೇ 5,133 ರೂ. ಗೆ 180 ಅವಧಿಯ ಪ್ಲಾನ್ ಹಾಗೂ 9,558 ರೂ, ಗಳ ಪ್ಲ್ಯಾನ್ ಗೆ 360 ದಿನಗಳ ಪ್ಲಾನ್ ನೀಡುತ್ತಿದೆ.