Select Your Language

Notifications

webdunia
webdunia
webdunia
webdunia

ರಿಲಯನ್ಸ್ ಜಿಯೊ ವಿರುದ್ಧ ವೊಡಾಫೋನ್ ದೂರು!

ರಿಲಯನ್ಸ್ ಜಿಯೊ
ನವದೆಹಲಿ: ರಿಲಯನ್ಸ್ ಸಂಸ್ಥೆಯ ಜಿಯೊ ಸಿಮ್ ಆರಂಭಿಸಿದಾಗಿನಿಂದ ದೇಶದ ಎಲ್ಲಾ ಟೆಲಿಕಾಂ ಸಂಸ್ಥೆಗಳು ಪೈಪೋಟಿಗೆ ಬಿದ್ದವರಂತೆ ದರ ಸಮರ ಆರಂಭಿಸಿತ್ತು. ಇದೀಗ ವೊಡಾಫೋನ್ ಸಂಸ್ಥೆ ಜಿಯೊ ಸಮ್ಮರ್ ಸಪ್ರೈಸ್ ಆಫರ್ ವಿರುದ್ದ ದೂರು ನೀಡಿದೆ.

 

ಟ್ರಾಯ್ ಗೆ ದೂರು ನೀಡಿರುವ ವೊಡಾಫೋನ್, ಜಿಯೊ ಟ್ರಾಯ್ ಸೂಚನೆಯ ಹೊರತಾಗಿಯೂ ಸಮ್ಮರ್ ಸಪ್ರೈಸ್ ಪ್ಯಾಕೇಜ್ ನೀಡುವ ಮೂಲಕ ಗ್ರಾಹಕರನ್ನು ವಂಚಿಸುತ್ತಿದೆ ಎಂದಿದೆ. ಇತ್ತೀಚೆಗಷ್ಟೇ ಭಾರತೀಯ ಟೆಲಿಕಾಂ ಪ್ರಾಧಿಕಾರ ಟ್ರಾಯ್ ಸಮ್ಮರ್ ಸಪ್ರೈಸ್ ಯೋಜನೆ ನಿಲ್ಲಿಸುವಂತೆ ಸೂಚನೆ ನೀಡಿತ್ತು.

 
ಅಲ್ಲದೆ, ಗ್ರಾಹಕರು ಮತ್ತು ರಿಟೈಲ್ ಮಳಿಗೆಗಳ ಮಾಲಿಕರಿಗೆ ಸಮ್ಮರ್ ಸಪ್ರೈಸ್ ಆಫರ್ ಮುಂದುವರಿಸುವಂತೆ ಸಂದೇಶ ಕಳುಹಿಸುತ್ತಿದೆ ಎಂದು ವೊಡಾಫೋನ್ ದೂರಿದೆ. ಇದರೊಂದಿಗೆ ಟೆಲಿಕಾಂ ಸಂಸ್ಥೆಗಳ ದರ ಸಮರ ಸಂಘರ್ಷದ ರೂಪ ತಳೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಬಲ್ ಮೀನಿಂಗ್ ಜೋಕ್ ಹೇಳಿದ ನವಜೋತ್ ಸಿಂಗ್ ಸಿದು ವಿರುದ್ಧ ದೂರು!