ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಜಾಗತಿಕ ಏರಿಳಿತಗಳ ನಡುವೆಯೂ ತನ್ನ ದೃಢವಾದ ಆರ್ಥಿಕ ನೀತಿಗಳಿಂದಾಗಿ ಶೇ6.3ರಷ್ಟು ಏರಿಕೆ ಕಾಣಲಿದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.ಇದರಲ್ಲಿ ಪ್ರಮುಖವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರಗಳನ್ನು ಸಮ ಪ್ರಮಾಣದಲ್ಲಿ ಏರಿಳಿತ ಮಾಡದಿದ್ದುದೇ ಪ್ರಮುಖ ಕಾರಣವಾಗಿದೆ. ಹಾಗೆಯೇ ಭಾರತ ಸರ್ಕಾರವು ಹಲವು ವಸ್ತುಗಳ ರಫ್ತು ಮಾಡುವುದನ್ನು ನಿಷೇಧಿಸಿ ಅವುಗಳ ಬೆಳೆಯುವಿಕೆಗೆ ಅಗತ್ಯ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸುತ್ತಿದೆ. ಹಾಗಾಗಿ ಭಾರತದ ಆರ್ಥಿಕತೆಯಲ್ಲಿ ಹಣದುಬ್ಬರವೂ ಸಹ ಸ್ವಲ್ಪ ಕಡಿಮೆಯಾಗಿ 5.9ಕ್ಕೆ ಬಂದು ನಿಲ್ಲಲಿದೆ. ಎಂದು ತಿಳಿಸಿದೆ.