Select Your Language

Notifications

webdunia
webdunia
webdunia
webdunia

ಈ ದೇಶಗಳಲ್ಲಿ ಐಫೋನ್‌ ಬೆಲೆ ತುಂಬಾ ದುಬಾರಿ

ಈ ದೇಶಗಳಲ್ಲಿ ಐಫೋನ್‌ ಬೆಲೆ ತುಂಬಾ ದುಬಾರಿ
New Delhi , ಸೋಮವಾರ, 2 ಜನವರಿ 2017 (09:28 IST)
ಐಫೋನ್ ಎಂದರೇನೇ ದುಬಾರಿ. ಅವುಗಳನ್ನು ಕೊಳ್ಳಬೇಕಾದರೆ ಹೆಚ್ಚಿಗೆ ದುಡ್ಡು ಬಿಚ್ಚಲೇಬೇಕು. ಆದರೆ ಬ್ರೆಜಿಲ್, ಭಾರತ, ಸ್ವೀಡನ್, ಡೆನ್ಮಾರ್ಕ್ ಅಥವಾ ಇಟಲಿ ದೇಶಗಳಿಗೆ ಪ್ರವಾಸ ಹೊರಟಿದ್ದರೆ ಐಫೋನನ್ನು ಕಳೆದುಕೊಳ್ಳಬೇಡಿ ಎಂದು ಡ್ಯುಯಿಸ್ ಬ್ಯಾಂಕ್ ಹೇಳುತ್ತಿದೆ. 
 
ಕಾರಣ ಈ ದೇಶಗಳಲ್ಲಿ ಐಫೋನ್ ಬೆಲೆ ತುಂಬಾ ದುಬಾರಿ. ಒಂದು ವೇಳೆ ಈ ದೇಶಗಳಲ್ಲಿ ಐಫೋನ್ ಕಳೆದುಕೊಂಡರೆ ಇನ್ನೊಂದು ತಗೋಬೇಕು ಅಂದ್ರೆ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಪ್ರತಿವರ್ಷ ಉತ್ಪನ್ನನಗಳ ಬೆಲೆಗಳ ವಾರ್ಷಿಕ ವರದಿಯನ್ನು ಡ್ಯುಯಿಸ್ ಬ್ಯಾಂಕ್ ಬಿಡುಗಡೆ ಮಾಡುತ್ತದೆ. ಬೇರೆಬೇರೆ ದೇಶಗಳ ಬೆಲೆಗಳೊಂದಿಗೆ ತಾಳೆ ಮಾಡಿನೋಡುತ್ತದೆ. ಇದೀಗ ಐಫೋನ್ ಬೆಲೆ ಯಾವಯಾವ ದೇಶದಲ್ಲಿ ಎಷ್ಟೆಷ್ಟು ಬೆಲೆಗೆ ಮಾರಾಟವಾಗುತ್ತಿದೆ ಎಂಬುದನ್ನು ಬಿಡುಗಡೆ ಮಾಡಿದೆ.
 
ಐಫೋನ್ ಬೆಲೆ ಹೆಚ್ಚಾಗಿರುವ ಟಾಪ್ ದೇಶಗಳು 
 
ದೇಶ                   2016 ಬೆಲೆ (ಡಾಲರ್‌ಗಳಲ್ಲಿ)
ಬ್ರೆಜಿಲ್                 931
ಇಂಡೋನೇಶಿಯಾ    865 
ಸ್ವೀಡನ್                 796
ಭಾರತ                  784
ಇಟಲಿ                    766

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಗೂ ಮುನ್ನವೇ ಈ ಸ್ಮಾರ್ಟ್‌ಫೋನ್ ಲೀಕ್