Select Your Language

Notifications

webdunia
webdunia
webdunia
webdunia

ಬಿಡುಗಡೆಗೂ ಮುನ್ನವೇ ಈ ಸ್ಮಾರ್ಟ್‌ಫೋನ್ ಲೀಕ್

ಬಿಡುಗಡೆಗೂ ಮುನ್ನವೇ ಈ ಸ್ಮಾರ್ಟ್‌ಫೋನ್ ಲೀಕ್
New Delhi , ಸೋಮವಾರ, 2 ಜನವರಿ 2017 (09:25 IST)
ಬಿಡುಗಡೆಗೂ ಮುನ್ನವೇ ಸಿನಿಮಾ ಲೀಕ್ ಆದರೆ ಜನರಿಗೆ ಆಸಕ್ತಿ ಹೋಗಿ ಬಿಡುತ್ತದೆ. ಈ ವರ್ಷ ಗೆಲಾಕ್ಸಿ ಹೊಸ ಆವೃತ್ತಿ ಫೋನ್‌ಗಳೊಂದಿಗೆ ಸ್ಯಾಂಸಂಗ್ ಗ್ರಾಹಕರ ಮುಂದೆ ಬರಲು ಪ್ಲಾನ್ ಮಾಡಿತ್ತು. ಜನವರಿ 5ಕ್ಕೆ ಗೆಲಾಕ್ಸಿ ಎ (2017) ಸೀರಿಸ್ ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸಿತ್ತು.
 
ಕೌಲಾಲಂಪುರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೂ ಆಹ್ವಾನ ಹೋಗಿತ್ತು. ಆದರೆ ಭರ್ಜರಿಯಾಗಿ ಬಿಡುಗಡೆ ಮಾಡುವುದಕ್ಕೂ ಮುನ್ನವೇ ಆ ಫೋನ್ ವಿವರಗಳು ಲೀಕ್ ಆಗಿವೆ. ಗೆಲಾಕ್ಸಿ ಎ3, ಗೆಲಾಕ್ಸಿ ಎ5, ಗೆಲಾಕ್ಸಿ ಎ7 ಮೂರು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ನೀರು, ಧೂಳು ನಿರೋಧಕ ಸೌಲಭ್ಯ ಈ ಫೋನ್‍ಗಳಿಗಿದ್ದು, ಫಿಂಗಲ್ ಪ್ರಿಂಟ್ ಸ್ಕ್ಯಾನರ್, ಎನ್‍ಎಫ್‍ಸಿ ಸುದುಪಾಯಗಳು ಇವೆ. 
 
ಲೀಕ್ ಆಗಿರುವ ಗೆಲಾಕ್ಸಿ ಎ7 (2917) ವಿಶೇಷಗಳು
* 5.7 ಇಂಚು ಸೂಪರ್ ಅಮೊಲೆಡ್ದ್ ಫುಲ್ ಎಚ್‍ಡಿ ಸ್ಪರ್ಶಸಂವೇದಿ ಪರದೆ
* ಆಕ್ಟಾಕೋರ್ ಎಕ್ಸಿನೋಸ್ 7880 ಪ್ರೋಸೆಸರ್
* 3 ಜಿಬಿ ರ್ಯಾಮ್
* 32 ಜಿಬಿ ಇಂಟರ್‌ನಲ್ ಮೆಮೊರಿ
* 16 ಮೆಗಾ ಪಿಕ್ಸೆಲ್ ಮುಂಬದಿ ಮತ್ತು ಹಿಂಬದಿ ಕ್ಯಾಮೆರಾ
* ಬೆಲೆ ಸುಮಾರು ರೂ. 28,800
 
 
ಲೀಕ್ ಆದ ಗೆಲಾಕ್ಸಿ ಎ5 (2017) ವಿಶೇಷಗಳು
* 5.2 ಇಂಚು ಫುಲ್ ಎಚ್‌ಡಿ ಸೂಪರ್ ಅಮೊಲೆಡ್ ಪರದೆ
 * ಆಕ್ಟಾ ಕೋರ್ ಎಕ್ಸಿನೋಸ್ 7880 ಪ್ರೋಸೆಸರ್
* 2 ಜಿಬಿ ರ್ಯಾಮ್
* 32 ಜಿಬಿ ಹೆಚ್ಚಿಸಿಕೊಳ್ಳಬಹುದಾದ ಸ್ಟೋರೇಜ್
* 16 ಎಂಪಿ ಹಿಂಬದಿ ಮತ್ತು ಮುಂಬದಿ ಕ್ಯಾಮೆರಾ
* ಬೆಲೆ ಸುಮಾರು ರೂ.25,700
 
ಗೆಲಾಕ್ಸಿ ಎ3 (2017) ವಿಶೇಷಗಳು
* 4.7 ಇಂಚು ಎಚ್‌ಡಿ ಸೂಪರ್ ಅಮೊಲೆಡ್ ಪರದೆ
* ಆಕ್ಟಾಕೋರ್ ಎಕ್ಸಿನೋಸ್ 7870 ಪ್ರೋಸೆಸರ್
* 2 ಜಿಬಿ ರ್ಯಾಮ್
* 16 ಜಿಬಿ ಇಂಟರ್ನಲ್ ಸ್ಟೋರೇಜ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಪ್ಪು ಹಣ ನಿಯಂತ್ರಣದ ಉದ್ದೇಶವಿದ್ದರೆ, ಮೊದಲು ನಿಮ್ಮ ಮನೆ ಕ್ಲೀನ್ ಮಾಡ್ಕೊಳ್ಳಿ: ಎಸ್.ಆರ್.ಹಿರೇಮಠ್