Select Your Language

Notifications

webdunia
webdunia
webdunia
webdunia

ಕಪ್ಪು ಹಣ ನಿಯಂತ್ರಣದ ಉದ್ದೇಶವಿದ್ದರೆ, ಮೊದಲು ನಿಮ್ಮ ಮನೆ ಕ್ಲೀನ್ ಮಾಡ್ಕೊಳ್ಳಿ: ಎಸ್.ಆರ್.ಹಿರೇಮಠ್

ಕಪ್ಪು ಹಣ ನಿಯಂತ್ರಣದ ಉದ್ದೇಶವಿದ್ದರೆ, ಮೊದಲು ನಿಮ್ಮ ಮನೆ ಕ್ಲೀನ್ ಮಾಡ್ಕೊಳ್ಳಿ: ಎಸ್.ಆರ್.ಹಿರೇಮಠ್
ಹುಬ್ಬಳ್ಳಿ , ಸೋಮವಾರ, 2 ಜನವರಿ 2017 (09:19 IST)
ಕಪ್ಪು ಹಣ ನಿಯಂತ್ರಣಕ್ಕೆ ತರುವ ಉದ್ದೇಶವಿದ್ದರೆ ಮೊದಲು ನಿಮ್ಮ ಮನೆ ಕ್ಲೀನ್ ಮಾಡಿ. ಇದರಿಂದ ಮಾತ್ರ ಸ್ವಚ್ಛ ಭಾರತ ಹಾಗೂ ನೋಟು ನಿಷೇಧ ನಿರ್ಧಾರಕ್ಕೆ ಬೆಲೆ ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಕುರಿತು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಲೇವಡಿ ಮಾಡಿದ್ದಾರೆ. 
 
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾದವರು ಮೊದಲು ತಮ್ಮ ಪಕ್ಷದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪತ್ನಿ ವಿರುದ್ಧ ಕೇಳಿ ಬಂದಿರುವ 40 ಸಾವಿರ ಕೋಟಿ ಗಣಿ ವ್ಯವಹಾರ ಹಾಗೂ ಸಂಸದ ಶ್ರೀರಾಮುಲು ಅವರು ನೂರು ಕೋಟಿ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿಸಿದ್ದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಎಂದು ಸವಾಲ್ ಎಸೆದರು. 
 
ಜನಾರ್ದನ ರೆಡ್ಡಿ ಹತ್ತಿರವಿರುವುದೆಲ್ಲ ಕಪ್ಪು ಹಣ ಎಂದು ಎಲ್ಲರಿಗೂ ಗೊತ್ತು. ಅದನ್ನು ನೀವು ಪ್ರಶ್ನಿಸುತ್ತಿಲ್ಲ. ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ್ದೀರಿ. ಹಾಗೇ ನಿಮ್ಮ ಅಂತರಂಗವೂ ಶುದ್ಧ ಮಾಡಿಕೊಳ್ಳಿ ಎಂದರು.
 
ರಾಜ್ಯದ ಮುಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕೀಯದಲ್ಲಿ ಇರಲು ಸೂಕ್ತ ವ್ಯಕ್ತಿ ಅಲ್ಲ. ಮೊದಲು ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ. ಆಗ ಮಾತ್ರ ನೀವು ಮಾಡಿದ ಘೋಷಣೆಗಳಿಗೆ ಬೆಲೆ ಬರುತ್ತದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಕಿಡಿಕಾರಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇಜ್ರಿವಾಲ್‌ಗೆ ಬೂಟೇಟು