Select Your Language

Notifications

webdunia
webdunia
webdunia
webdunia

ಸಬ್ಸಿಡಿ ರಹಿತ ಸಿಲಿಂಡರ್‌ ಗಳ ದರ ರೂ.15.5 ಏರಿಕೆ

ಸಬ್ಸಿಡಿ ರಹಿತ ಸಿಲಿಂಡರ್‌ ಗಳ ದರ ರೂ.15.5 ಏರಿಕೆ
ನವದೆಹಲಿ , ಮಂಗಳವಾರ, 3 ಸೆಪ್ಟಂಬರ್ 2019 (08:45 IST)
ನವದೆಹಲಿ : ಸಬ್ಸಿಡಿ ರಹಿತ ಸಿಲಿಂಡರ್‌ ಗಳ ದರ ಏರಿಕೆ ಮಾಡಲಾಗಿದ್ದು, ಈ ಮೂಲಕ ಗ್ರಾಹಕರಿಗೆ ಕೆಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. 




ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರಗಳು ಕುಸಿದಿದ್ದು, ಭಾನುವಾರ ದರ ಪರಿಷ್ಕರಣೆಯನ್ನು ಮಾಡಲಾಗಿದೆ. ಆದ್ದರಿಂದ, ಸಬ್ಸಿಡಿರಹಿತ ಸಿಲಿಂಡರ್‌ ಗೆ ರೂ.15.5 ಏರಿಕೆ ಮಾಡಲಾಗಿದೆ.


ಈ ಹಿಂದೆ 14.5 ಕೆ.ಜಿ. ಸಿಲಿಂಡರ್‌ ಬೆಲೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 574.50 ರೂಪಾಯಿಗಳಿದ್ದು, ಈಗ 590 ರೂಪಾಯಿ ತಲುಪಿದೆ. ಮುಂಬೈನಲ್ಲಿ ಈಗ ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ 562 ರೂಪಾಯಿಗಳಾಗಿದ್ದರೆ, ಕೋಲ್ಕತ್ತಾದಲ್ಲಿ 616.50 ರೂಪಾಯಿಗಳಾಗಿದೆ. ಅದೇ ರೀತಿ ಚೆನ್ನೈನಲ್ಲಿ 606.50 ರೂಪಾಯಿಗಳಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಹಬ್ಬಕ್ಕೆ ತವರಿಗೆ ಹೋದ ಪತ್ನಿ: ಮಚ್ಚಿನೇಟು ಹಾಕಿದ ಗಂಡ