Select Your Language

Notifications

webdunia
webdunia
webdunia
webdunia

ಟಿಸಿಎಲ್‌ನಿಂದ ಐರಿಸ್ ಸ್ಕ್ಯಾನರ್ ವೈಶಿಷ್ಟ್ಯದ ಸ್ಮಾರ್ಟ್‌ಪೋನ್ ಬಿಡುಗಡೆ

ಟಿಸಿಎಲ್‌
ನವದೆಹಲಿ , ಬುಧವಾರ, 29 ಜೂನ್ 2016 (11:51 IST)
ಚೀನಾ ಮೂಲದ ಬಹುರಾಷ್ಟೀಯ ಸಂಸ್ಥೆಯಾಗಿರುವ ಟಿಸಿಎಲ್ ಕಾರ್ಪೊರೇಶನ್, ಐರಿಸ್ ಸ್ಕ್ಯಾನರ್ ಹೊಂದಿರುವ ಸ್ಮಾರ್ಟ್‌ಪೋನ್‌ಗಳನ್ನು ಪ್ರಸಕ್ತ ಸಾಲಿನ ಜುಲೈ 4 ರಂದು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.  
 
ಈ ಹೊಸ ವೈಶಿಷ್ಟ್ಯದ ಸ್ಮಾರ್ಟ್‌ಪೋನ್‌ಗಳು ಕಣ್ಣಿನ ಬಯೋಮೆಟ್ರಿಕ್ ಸೆನ್ಸಾರ್ ಹೊಂದಿದ್ದು, ಬಳಕೆದಾರರು ಕೇವಲ ಕಣ್ಣ ಮಿಟುಕಿಸುವುದರ ಮೂಲಕ ಪೋನ್‌ನ್ನು ಅನ್‌ಲಾಕ್ ಮಾಡಬಹುದಾಗಿದೆ. ಈ ಹೊಸ ವೈಶಿಷ್ಟ್ಯದ ಪೋನ್‌ಗಳನ್ನು ಟಿಸಿಎಲ್‌ ಅಂಗ ಸಂಸ್ಥೆಯಾಗಿರುವ ಅಸೋಸಿಯೇಷನ್ ಅಲ್ಕಾಟೆಲ್ ಸಂಸ್ಥೆ ಬಿಡುಗಡೆಗೊಳಿಸುತ್ತಿದೆ.
 
ಸದ್ಯ, ಕಂಪೆನಿಯು ತನ್ನ ಮುಂಬರುವ ಸ್ಮಾರ್ಟ್‌ಪೋನ್ ತಾಂತ್ರಿಕ ವಿವರಣೆಯ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ. ಆದಾಗ್ಯೂ, ಇತ್ತೀಚಿನ ವರದಿಯ ಪ್ರಕಾರ, ಈ ಹೊಸ ವೈಶಿಷ್ಟ್ಯದ ಸ್ಮಾರ್ಟ್‌ಪೋನ್‌ಗಳು ತಿರುವುಳ್ಳ ಡಿಸ್‌ಪ್ಲೇ ಹೊಂದಿದ್ದು, .1 ಜಿಎಚ್‌ಝಡ್ ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದೆ. ಇದಲ್ಲದೆ, ಈ ಪೋನ್‌ಗಳು ಸೆಲ್ಫಿ ಕೇಂದ್ರಿತ ಡಿವೈಸ್‌ಗಳಾಗಿವೆ ಎಂದು ತಿಳಿಸಿದೆ.
 
ಟಿಸಿಎಲ್ ಸಂಸ್ಥೆಯು ಅಲ್ಕಾಟೆಲ್ ಸಹಭಾಗಿತ್ವದಲ್ಲಿ ವಿಶ್ವದ 170 ದೇಶಗಳಲ್ಲಿ ಪೋನ್, ಏರ್ ಕಂಡಿಷನರ್, ವಾಶಿಂಗ್ ಮಶಿನ್, ರೆಫ್ರಿಜರೇಟರ್ ಮತ್ತು ಸಣ್ಣ ವಿದ್ಯುತ್ ಉಪಕರಣಗಳನ್ನು ಮಾರಾಟ ಮಾಡುತ್ತಿದೆ.
 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಡತನ: ಸಾಕಲಾಗದೆಂದು ಮಗನನ್ನೇ ಸಾಯಿಸಿದಳು