Select Your Language

Notifications

webdunia
webdunia
webdunia
webdunia

ಅವಹೇಳನ ಮಾಡಿದ ಚೀನಾ ಅಧಿಕಾರಿಗೆ ಭಾರತೀಯ ನೌಕರರಿಂದ ಸರಿಯಾಗೇ ಸಿಕ್ತು!

ಅವಹೇಳನ ಮಾಡಿದ ಚೀನಾ ಅಧಿಕಾರಿಗೆ ಭಾರತೀಯ ನೌಕರರಿಂದ ಸರಿಯಾಗೇ ಸಿಕ್ತು!
NewDelhi , ಗುರುವಾರ, 20 ಜುಲೈ 2017 (11:28 IST)
ನವದೆಹಲಿ: ಭಾರತದಲ್ಲಿ ಜನಪ್ರಿಯವಾಗಿರುವ ಒಪ್ಪೊ ಮೊಬೈಲ್ ಸಂಸ್ಥೆ ಚೀನಾ ಮೂಲದ ಸಂಸ್ಥೆಯಾಗಿದೆ. ಇದಕ್ಕೆ ಭಾರತದಲ್ಲಿ ಒಳ್ಳೆಯ ಮಾರುಕಟ್ಟೆಯಿದೆ. ಆದರೆ ಪಂಜಾಬ್ ನ ಕಚೇರಿಯೊಂದರ ಚೀನಾ ಅಧಿಕಾರಿ ಭಾರತೀಯ ನೌಕರರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ಅವರು ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.


ಪಂಜಾಬ್ ಕಚೇರಿಯಲ್ಲಿ ನೌಕರರಿಗೆ ಬೇಕೆಂದೇ ಅವಧಿ ಮುಗಿದ ಮೇಲೆಯೂ ಕೆಲಸ ಮಾಡಿಸುವುದು, ಭಾರತೀಯರು ಹಣಕ್ಕಾಗಿ ಕೆಲಸ ಮಾಡುತ್ತಾರೆ ಎಂದೆಲ್ಲಾ ಅವಹೇಳನ ಮಾಡುತ್ತಿದ್ದ ಚೀನಾ ಅಧಿಕಾರಿಯ ವರ್ತನೆಯಿಂದ ನೌಕರರು ಬೇಸತ್ತಿದ್ದರು. ಇದಕ್ಕಾಗಿ ಸರಿಯಾಗಿಯೇ ಆ ಅಧಿಕಾರಿಗೆ ಬುದ್ಧಿ ಕಲಿಸಲು ಮುಂದಾದರು.

ಅದಕ್ಕಾಗಿ ಒಪ್ಪೊ ಸಂಸ್ಥೆಯ ಮಾನವ ಸಂಪನ್ಮೂಲ ಇಲಾಖೆಗೆ ಪತ್ರ ಬರೆದ ಭಾರತೀಯ ನೌಕರರು, ಇಲ್ಲಿ ನಡೆಯುತ್ತಿದ್ದ ಘಟನೆಗಳ ಬಗ್ಗೆ ವಿಸ್ತೃತವಾಗಿ ಬರೆದಿದ್ದಾರೆ. ಅಲ್ಲದೆ, ನಮ್ಮ ದೇಶದಲ್ಲಿದ್ದುಕೊಂಡು ನಮ್ಮ ದೇಶದ ಬಗ್ಗೆಯೇ ಕೇವಲವಾಗಿ ಮಾತನಾಡುವ ಸಂಸ್ಥೆಯ ಕೆಲಸ ನಮಗೆ ಬೇಡ ಎಂದು ನೌಕರರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಂದಕಕ್ಕೆ ಉರುಳಿದ ಬಸ್: 20ಕ್ಕೂ ಹೆಚ್ಚು ಪ್ರಯಾಣಿಕರ ಧಾರುಣ ಸಾವು