Select Your Language

Notifications

webdunia
webdunia
webdunia
webdunia

ಜಿಯೋ ಪೇಮೆಂಟ್ ಬ್ಯಾಂಕ್‍ಗೆ ಅನುಮತಿ

ರಿಲಯನ್ಸ್ ಜಿಯೋ ಪೇಮೆಂಟ್ ಬ್ಯಾಂಕ್
New Delhi , ಶುಕ್ರವಾರ, 3 ಮಾರ್ಚ್ 2017 (15:36 IST)
ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಭಾಗಿತ್ವದಲ್ಲಿ ಆರಂಭಿಸಿದ ಜಿಯೋ ಪೇಮೆಂಟ್ಸ್ ಬ್ಯಾಂಕ್ ಕಾರ್ಯಕಲಾಪಗಳನ್ನು ಪ್ರಾರಂಭಿಸಲು ಆರ್‌ಬಿಐನಿಂದ ಅನುಮತಿ ಲಭಿಸಿದೆ.
 
ಈ ಬ್ಯಾಂಕ್ ಕಾರ್ಯಕಲಾಪಗಳು ಈ ತಿಂಗಳ ಕೊನೆಗೆ ಪ್ರಾರಂಭವಾಗಬಹುದು ಎನ್ನುತ್ತವೆ ಮೂಲಗಳು. ಈ ಬ್ಯಾಂಕ್ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಫೈನಾನ್ಷಿಯಲ್, ವಿಮಾ ಉತ್ಪನ್ನಗಳನ್ನು ಸಹ ಮಾರಾಟ ಮಾಡುವ ಅವಕಾಶ ಇದೆ ಎನ್ನಲಾಗಿದೆ.
 
ರಿಲಯನ್ಸ್ ಜಿಯೋ ಈಗಾಗಲೆ 10 ಕೋಟಿಗೂ ಅಧಿಕ ಗ್ರಾಹಕರನ್ನು ಸಂಪಾದಿಸಿಕೊಂಡಿರುವುದು ಗೊತ್ತೇ ಇದೆ. ಜಿಯೋ ತನ್ನ ಹಳೆಯ, ಹೊಸ ಗ್ರಾಹಕರಿಗೆ ರೀಟೇಲ್ ನೆಟ್‌ವರ್ಕ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ನೀಡುವ ಅವಕಾಶ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಲಿಕಾಂ ಕ್ಷೇತ್ರಕ್ಕೆ ಅಡಿಯಿಟ್ಟ ಏರ್‌ವಾಯ್ಸ್