Select Your Language

Notifications

webdunia
webdunia
webdunia
webdunia

ಟೆಲಿಕಾಂ ಕ್ಷೇತ್ರಕ್ಕೆ ಅಡಿಯಿಟ್ಟ ಏರ್‌ವಾಯ್ಸ್

ಟೆಲಿಕಾಂ ಕ್ಷೇತ್ರಕ್ಕೆ ಅಡಿಯಿಟ್ಟ ಏರ್‌ವಾಯ್ಸ್
New Delhi , ಶುಕ್ರವಾರ, 3 ಮಾರ್ಚ್ 2017 (15:25 IST)
ಅನಿವಾಸಿ ಭಾರತೀಯ ಶಿವಕುಮಾರ್ ಕುಪ್ಪುಸ್ವಾಮಿಗೆ ಸೇರಿದ ಆಡ್‌ಪೇ ಮೊಬೈಲ್ ಪೇಮೆಂಟ್ ಕಂಪೆನಿ ಇತ್ತೀಚೆಗೆ ಏರೋವಾಯ್ಸ್ ಹೆಸರಿನ ಟೆಲಿಕಾಂ ಸೇವೆಗಳನ್ನು ಪ್ರಾರಂಭಿಸಿದೆ. ವರ್ಚ್ಯುವಲ್ ನೆಟ್‌ವರ್ಕ್ ಆಪರೇಟರ್ (ವಿಎನ್‌ವೋ) ಆಗಿರುವ ಇದು ಮುಂಬರುವ ತಿಂಗಳು ಆರಂಭಿಸುವ ಈ ಸೇವೆಗಳ ಮೂಲಕ ಮೊದಲ ವರ್ಷ ಐದು ಲಕ್ಷ ಗ್ರಾಹಕರನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ ಎಂದು ಕಂಪೆನಿ ತಿಳಿಸಿದೆ.
 
ಮೊಬೈಲ್ ಸೇವೆಗಳ ಮೇಲೆ ಸುಮಾರು ರೂ.300 ಕೋಟಿ ಬಂಡವಾಳ ಹೂಡುವುದಾಗಿ, ಸುಮಾರು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುತ್ತಿರುವುದಾಗಿ ಆಡ್‌ಪೇ ಮೊಬೈಲ್ ಪೇಮೆಂಟ್ ವ್ಯವಸ್ಥಾಪಕ ಸಿಇಓ ಶಿವಕುಮಾರ್ ಕುಪ್ಪುಸ್ವಾಮಿ ತಿಳಿಸಿದ್ದಾರೆ.
 
ಮೊದಲು ತಮಿಳುನಾಡು, ಚೆನ್ನೈ, ಪಾಂಡಿಚೆರಿ ವೃತ್ತಗಳಲ್ಲಿ ಏಪ್ರಿಲ್ 14ರಿಂದ ಸೇವೆಗಳನ್ನು ಪ್ರಾರಂಭಿಸಲು ಕಾರ್ಯೋನ್ಮುಖವಾಗಿರುವುದಾಗಿ ತಿಳಿಸಿದ್ದಾರೆ. ತಮಗೆ ಬೇರೆ ಸ್ಪೆಕ್ಟ್ರಂ ಇಲ್ಲದ ಕಾರಣ ಇತರೆ ಟೆಲ್ಕೋಗಳಿಗೆ ಸ್ವಲ್ಪ ಮೊತ್ತ ಸಲ್ಲಿಸಿ ಅವುಗಳ ಇನ್‌ಫ್ರಾಸ್ಟ್ರಕ್ಚರನ್ನು ಉಪಯೋಗಿಸಿಕೊಳ್ಳುತ್ತಿರುವುದಾಗಿ ಶಿವಕುಮಾರ್ ತಿಳಿಸಿದ್ದಾರೆ.
 
ಈಗಾಗಲೆ ಸ್ವಿಟ್ಜಲ್ಯಾಂಡ್, ಜರ್ಮನಿ, ಸ್ಪೇನ್, ಆಸ್ಟ್ರೀಯಾ ಇನ್ನಿತರೆ ದೇಶಗಳಲ್ಲಿ ಹಲವು ಟೆಲಿಕಾಂ ಕಂಪೆನಿಗಳಲ್ಲಿ ಬಂಡವಾಳ ಹೂಡಿರುವುದಾಗಿ ವಿವರ ನೀಡಿದ್ದಾರೆ. ಬಿಎಸ್‌ಎನ್‌ಎಲ್, ಎಂಟಿಎನ್ಎಲ್, ಏರ್‌ಟೆಲ್‌ನಂತಹ ಪೂರ್ಣಪ್ರಮಾಣದ ಟೆಲಿಕಾಂ ಆಪರೇಟರ್‌ಗಳಿಗೆ ಇವು ರೀಟೇಲರ್ ಆಗಿ ಕೆಲಸ ಮಾಡುವ ವಿಎನ್‍ವೋಗಳು...ಮೊಬೈಲ್, ಲ್ಯಾಂಡ್‌ಲೈನ್, ಇಂಟರ್‌ನೆಟ್‍ನಂತಹ ಟೆಲಿಕಾಂ ಸಂಬಂಧಿ ಸೇವೆಗಳನ್ನು ನೀಡಲಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರೆಲ್ಲಾ ಕಾಂಗ್ರೆಸ್‌ಗೆ ಬರ್ತಾರೆ ಎಂದು ಕಾದು ನೋಡಿ: ಪರಮೇಶ್ವರ್