Select Your Language

Notifications

webdunia
webdunia
webdunia
webdunia

ಅಧಿಕಾರವಧಿ ಅಂತ್ಯಗೊಂಡ ನಂತರ ಅಮೆರಿಕಾಗೆ ತೆರಳಲಿರುವ ರಘುರಾಮ್ ರಾಜನ್

ಸರ್ವ್ ಬ್ಯಾಂಕ್ ಗವರ್ನರ್
ನವದೆಹಲಿ , ಬುಧವಾರ, 1 ಜೂನ್ 2016 (18:41 IST)
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರ ಅಧಿಕಾರಾವಧಿ ಪ್ರಸಕ್ತ ಸಾಲಿನ ಸೆಪ್ಟೆಂಬರ್ ತಿಂಗಳಲ್ಲಿ ಅಂತ್ಯಗೊಳ್ಳುತ್ತಿದ್ದು, ಮುಂದಿನ ಅವಧಿಗೆ ತಾವು ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಎಂದು ಸ್ವಷ್ಟಪಡಿಸಿದ್ದಾರೆ.
 
ರಘುರಾಮ್ ರಾಜನ್ ತಮ್ಮ ಅಧಿಕಾರಾವಧಿ ಮುಗಿದ ನಂತರ ಅಮೆರಿಕಾಕ್ಕೆ ತೆರಳುತ್ತಿರುವುದಾಗಿ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ರಾಜನ್ ಅವರ ಆಪ್ತ ಮೂಲಗಳ ನೀಡಿರುವ ಮಾಹಿತಿ ಉಲ್ಲೇಖಿಸಿರುವ ಪತ್ರಿಕೆ, ರಾಜನ್ ಅವರ ಅಧಿಕಾರಾವಧಿ ಮುಗಿದ ನಂತರ ಅಮೆರಿಕಾಗೆ ತೆರಳಿ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಭಾರತೀಯ ಆರ್ಥಿಕತೆ ಕುರಿತು ಸಂಶೋಧನೆ ನಡೆಸಲಿದ್ದಾರೆ ಎಂದು ಪ್ರಕಟಿಸಿದೆ 
 
ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಗುಡುಗಿ ವಜಾಗೊಳಿಸುವಂತೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದರು. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ರಾಜನ್ ಅಧಿಕಾರದಲ್ಲಿ ಮುಂದುವರೆಯಲಿ ಎಂದು ಸೂಚಿಸಿದ್ದರು ಎಂದು ದೈನಂದಿನ ಪತ್ರಿಕೆ ವರದಿ ಮಾಡಿದೆ.
 
ಸುಬ್ರಮಣಿಯನ್ ಸ್ವಾಮಿ ಅವರ ಬೇಡಿಕೆ ಕುರಿತು ಸಾಕಷ್ಟು ಬಿಜೆಪಿ ನಾಯಕರು ಪ್ರಶ್ನಿಸಿದ್ದು, ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಬೆಂಬಲಿಸುತ್ತಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿವೆ.
 
ದೈನಂದಿನ ವರದಿಯ ಪ್ರಕಾರ ಮುಂದಿನ ಎರಡು ವರ್ಷಗಳ ಅವಧಿಯವರೆಗೂ ರಘುರಾಮ್ ರಾಜನ್ ಅವರೇ ಮುಂದುವರೆಯಲಿ ಎಂದು ಪ್ರಧಾನಿ ಬಯಸುತ್ತಿದ್ದಾರೆ ಎಂದು ತಿಳಿಸಿದೆ.
 
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್‌ರನ್ನು ವಜಾಗೊಳಿಸಿದಲ್ಲಿ ವಿಶ್ವದಾದ್ಯಂತ ತಪ್ಪು ಸಂದೇಶ ಸಾರಿದಂತಾಗುತ್ತದೆ ಎಂದು ಪ್ರದಾನಿ ಮೋದಿ, ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿಯವರಿಗೆ ಮನವರಿಕೆ ಮಾಡಿಕೊಟ್ಟ ನಂತರ , ಜೇಟ್ಲಿ ರಘುರಾಮ್ ರಾಜನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಿಪಲ್ ತಲಾಖ್ ನಿಷೇಧ ಆಂದೋಲನಕ್ಕೆ 50,000 ಸಹಿ