Select Your Language

Notifications

webdunia
webdunia
webdunia
webdunia

ಮೇ 1ರಿಂದ ನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆ

ಮೇ 1ರಿಂದ ನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆ
ನವದೆಹಲಿ , ಬುಧವಾರ, 12 ಏಪ್ರಿಲ್ 2017 (15:58 IST)
ತಿಂಗಳಿಗೆ ಒಂದೆರಡು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಳಿತದ ಸುದ್ದಿ ಕೇಳುತ್ತಿದ್ದ ಗ್ರಾಹಕರು ಇನ್ಮುಂದೆ ನಿತ್ಯ ಏರಿಳಿತವನ್ನ ಅನುಭವಿಸಬೇಕಾಗುತ್ತದೆ. ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ತೈಲ ದರದ ಏರಿಳಿತಕ್ಕೆ ಅನುಗುಣವಾಗಿ ನಿತ್ಯ ತೈಲ ದರ ಪರಿಷ್ಕರಣೆಗೆ ನಿರ್ಧರಿಸಿವೆ. ಆರಂಭಿಕವಾಗಿ ಮೇ1ರಿಂದ  5 ಪ್ರಮುಖ ನಗರಗಳಲ್ಲಿ ಈ ನಿತ್ಯ ದರ ಪರಿಷ್ಕರಣೆ ಜಾರಿಯಾಗಲಿದ್ದು, ಬಳಿಕ ಇತರೆ ನಗರಗಳಿಗೂ ವಿಸ್ತರಣೆಯಾಗಲಿದೆ.

ತೈಲ ಮಾರುಕಟ್ಟೆಗೆ ಅನುಗುಣವಾಗಿ ಪ್ರತಿದಿನ ದೇಶದ ಎಲ್ಲ ಪೆಟ್ರೋಲ್ ಬಂಕ್`ಗಳಲ್ಲಿ ದರಪರಿಷ್ಕರಣೆ ಮಾಡುತ್ತೇವೆ ಎಂದು ಐಓಸಿ ಮುಖ್ಯಸ್ಥ ಬಿ. ಅಶೋಕ್ ಪಿಟಿಐಗೆ ತಿಳಿಸಿದ್ದಾರೆ. ಪ್ರಾಯೋಗಿಕವಾಗಿ ನಿತ್ಯ ತೈಲ ದರ ಪರಿಷ್ಕರಣೆ ಪುದುಚೇರಿ, ವಿಶಾಖಪಟ್ಟಣ, ರಾಜಸ್ಥಾನದ ಉದಯ್ ಪುರ್, ಜಾರ್ಖಂಡ್`ನ ಜೆಮ್ ಶೆಡ್ ಪುರ್ ಮತ್ತು ಪಂಜಾಬ್`ನ ಚಂಢೀಗಡದಲ್ಲಿ ಆರಂಭಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ತಾಂತ್ರಿಕವಾಗಿ ನಿತ್ಯ ದರ ಪರಿಷ್ಕರಣೆ ಸಾಧ್ಯವಿದೆ. ಆದರೆ, ಮೊದಲಿಗೆ ನಾವು ಪ್ರಾಯೋಗಿಕವಾಗಿ ಜಾರಿ ಮಾಡಬೇಕಿದೆ. ಬಳಿಕ ಇತರೆ ನಗರಗಳಿಗೂ ವಿಸ್ತರಣೆಯಾಗಲಿದೆ.ಎಂದಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಅರುಣಾಚಲ ಜನತೆ ಭಾರತದ ಅಕ್ರಮ ಅಡಳಿತದಿಂದ ಬೇಸತ್ತಿದ್ದಾರೆ: ಚೀನಾ ಡೈಲಿ