Select Your Language

Notifications

webdunia
webdunia
webdunia
webdunia

ಅರುಣಾಚಲ ಜನತೆ ಭಾರತದ ಅಕ್ರಮ ಅಡಳಿತದಿಂದ ಬೇಸತ್ತಿದ್ದಾರೆ: ಚೀನಾ ಡೈಲಿ

ಅರುಣಾಚಲ ಜನತೆ ಭಾರತದ ಅಕ್ರಮ ಅಡಳಿತದಿಂದ ಬೇಸತ್ತಿದ್ದಾರೆ: ಚೀನಾ ಡೈಲಿ
ಬೀಜಿಂಗ್\ , ಬುಧವಾರ, 12 ಏಪ್ರಿಲ್ 2017 (15:39 IST)
ಅರುಣಾಚಲ ಪ್ರದೇಶದ ತವಂಗ್ ಜಿಲ್ಲೆಗೆ ಟಿಬೆಟ್ ಧರ್ಮಗುರು ದಲೈ ಲಾಮಾ ಭೇಟಿ ನೀಡುವುದನ್ನು ಸದಾ ವಿರೋಧಿಸುತ್ತಿರುವ ಚೀನಾ, ಭಾರತದ ಅಕ್ರಮ ಅಡಳಿತದಿಂದ ಜನತೆ ಬೇಸತ್ತಿದ್ದಾರೆ ಎಂದು ವರದಿ ಮಾಡಿದೆ. 
 
ಭಾರತ ಸರಕಾರದ ಆಕ್ರಮ ಅಡಳಿತದಿಂದಾಗಿ ಅರುಣಾಚಲ ಪ್ರದೇಶದ ಜನತೆ ಕಠಿಣ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು ಚೀನಾ ದೇಶಕ್ಕೆ ಸೇರ್ಪಡೆಯಾಗಲು ಬಯಸಿದ್ದಾರೆ. ದಲೈ ಲಾಮಾ ಅವರು ತವಂಗ್ ಭೇಟಿ ನೀಡಲು ಅವಕಾಶ ನೀಡಿರುವ ಭಾರತ ಸರಕಾರವನ್ನು ಸರಕಾರಿ ಸ್ವಾಮ್ಯದ ಚೀನಾ ಡೈಲಿ ಟೀಕಿಸಿದೆ.  
 
ಚೀನಾ ಸರಕಾರದ ದೌರ್ಜನ್ಯದಿಂದ ಸಾವಿರಾರು ಟಿಬೆಟ್ ಯುವಕರು ಆತಂಕದ ಸ್ಥಿತಿ ಎದುರಿಸುತ್ತಿದ್ದು 120ಕ್ಕೂ ಹೆಚ್ಚು ಪ್ರತಿಭಟನಾಕಾರರು ಸಜೀವವಾಗಿ ದಹಿಸಿಕೊಂಡಿದ್ದಾರೆ. ಆದಾಗ್ಯೂ ಟಿಬೆಟ್‌ನ ದಕ್ಷಿಣ ಭಾಗದ ಜನತೆ ಭಾರತ ಸರಕಾರದ ಕಿರುಕುಳ ಎದುರಿಸುತ್ತಿದ್ದಾರೆ ಎನ್ನುವ ಆರೋಪ ಚೀನಾ ಮಾಡಿದೆ.
 
ಟಿಬೆಟ್ ಬೌದ್ಧದರ್ಮದ ಕೇಂದ್ರಸ್ಥಾನವಾದ ತವಂಗ್ ಜಿಲ್ಲೆಗೆ ದಲೈಲಾಮಾ ಭೇಟಿಗೆ ಅವಕಾಶ ನೀಡಿದ ಭಾರತ ಸರಕಾರ ಅವರನ್ನು ಬೆಂಬಲಿಸುತ್ತಿದೆ ಎಂದು ಚೀನಾ ಡೈಲಿ ಪತ್ರಿಕೆ ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

2022ರ ವೇಳೆಗೆ ನವಭಾರತ ನಿರ್ಮಾಣವಾಗಲೇಬೇಕು: ಮಿತ್ರಪಕ್ಷಗಳಿಗೆ ಮೋದಿ ಗಡುವು