ಐಓಸಿ ವತಿಯಿಂದ ಮನೆ ಬಾಗಿಲಿಗೆ ಬರಲಿದೆಯಂತೆ ಪೆಟ್ರೋಲ್-ಡೀಸೆಲ್

ಶುಕ್ರವಾರ, 4 ಜನವರಿ 2019 (11:53 IST)
ನವದೆಹಲಿ : ವಾಹನಗಳಿಗೆ ಪೆಟ್ರೋಲ್-ಡೀಸೆಲ್ ಹಾಕಿಸಲು ವಾಹನ ಸವಾರರು ಇಷ್ಟುದಿನ ಪೆಟ್ರೋಲ್ ಪಂಪ್ ಗೆ ಹೋಗಬೇಕಾಗಿತ್ತು. ಆದರೆ ಇನ್ನುಮುಂದೆ ಪೆಟ್ರೋಲ್-ಡೀಸೆಲ್ ಮನೆ ಬಾಗಿಲಿಗೆ ಬರಲಿದೆ.


ಹೌದು. ದೇಶದ ಅತಿದೊಡ್ಡ ತೈಲ ಮಾರ್ಕೆಟಿಂಗ್ ಕಂಪೆನಿ, ಐಓಸಿ (ಇಂಡಿಯನ್ ಆಯಿಲ್ ಕಾರ್ಪೊರೇಷನ್) ಪೆಟ್ರೋಲ್ ಮತ್ತು ಡೀಸೆಲ್ ಹೋಂ ಡೆಲಿವರಿ ಮಾಡಲಿದೆ. ಸದ್ಯಕ್ಕೆ ಕೋಲ್ಕತಾದ ಕೊಲ್ತೂರ್ನಲ್ಲಿರುವ ಪೆಟ್ರೋಲ್ ಪಂಪ್ ಪೆಟ್ರೋಲ್ ಮತ್ತು ಡೀಸಲ್ ವಿತರಣೆಯನ್ನು ಆರಂಭಿಸಿದ್ದು ಮುಂಬರುವ ದಿವಸದಲ್ಲಿ ದೇಶದ ಎಲ್ಲಾ ನಗರ ಸೇರಿದಂತೆ ಪ್ರಮುಖ ಊರುಗಳಲ್ಲಿ ಹೋಂ ಡೆಲೆವರಿ ನೀಡುವುದಾಗಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್(HPCL) CMD ಎಂ.ಕೆ. ಸುರಾನಾ ಅವರು ಹೇಳಿದ್ದಾರೆ.
ಆದರೆ ನಿಮ್ಮ ಮನೆ ಬಾಗಿಲಿಗೂ ಪೆಟ್ರೋಲ್-ಡೀಸೆಲ್ ಬರಬೇಕಾದ್ರೇ ಕನಿಷ್ಠ 200 ರಿಂದ 2500 ಲೀಟರ್ಗಳ ವರೆಗೆ ಆರ್ಡರ್ ಬುಕಿಂಗ್ ಮಾಡಬೇಕಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೀನುಗಾರರು ನಾಪತ್ತೆಯಾದ ಹಿನ್ನಲೆ; ನಾಳೆ ಉಡುಪಿಗೆ ಆಗಮಿಸಲಿರುವ ಗೃಹ ಸಚಿವರು