Select Your Language

Notifications

webdunia
webdunia
webdunia
webdunia

ಹೊಸ ವರ್ಷದ ಸಂಭ್ರಮದಲ್ಲಿ ಮಾಜಿ ಶಾಸಕರೊಬ್ಬರು ಎಸಗಿದ್ದಾರೆ ಇಂತಹ ಘೋರ ಕೃತ್ಯ

ಹೊಸ ವರ್ಷದ ಸಂಭ್ರಮದಲ್ಲಿ ಮಾಜಿ ಶಾಸಕರೊಬ್ಬರು ಎಸಗಿದ್ದಾರೆ ಇಂತಹ ಘೋರ ಕೃತ್ಯ
ನವದೆಹಲಿ , ಗುರುವಾರ, 3 ಜನವರಿ 2019 (07:41 IST)
ನವದೆಹಲಿ : ಹೊಸ ವರ್ಷದ ಸಂಭ್ರಮದಲ್ಲಿದ್ದ  ಮಾಜಿ ಶಾಸಕರೊಬ್ಬರು  ಖುಷಿಯಲ್ಲಿ ಗಂಡು ಹಾರಿಸಿದ ಪರಿಣಾಮ ಮಹಿಳೆಯೊಬ್ಬರನ್ನು ಗಂಭೀರವಾಗಿ ಗಾಯಗೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.


ದೆಹಲಿಯ ಜೆಡಿಯು ಮಾಜಿ ಶಾಸಕ ರಾಜು ಸಿಂಗ್ ಅವರ ಫಾರ್ಮ್ ಹೌಸ್ ನಲ್ಲಿ ಹೊಸ ವರ್ಷಾಚರಣೆಯ ಸಂಭ್ರಮದ ತಯಾರಿ ನಡೆದಿತ್ತು. ಈ ವೇಳೆ ಖುಷಿಯಲ್ಲಿ ರಾಜು ಸಿಂಗ್ ತಮ್ಮ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಇದರಲ್ಲಿ ಒಂದು ಗುಂಡು ಅವರ ಸ್ನೇಹಿತ ವಿಕಾಸ್ ಗುಪ್ತಾ ಪತ್ನಿಯ ಹಣೆಗೆ ತಗುಲಿದೆ. ಇದರಿಂದ ಗಂಭೀರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಈ ಘಟನೆಗೆ ಸಂಬಂಧಿಸಿದಂತೆ ರಾಜು ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿ ಟಿವಿ ಫುಟೇಜ್ ಗಳನ್ನು ಸಂಗ್ರಹಿಸಿದ್ದಾರೆ ಹಾಗೂ ರಾಜು ಸಿಂಗ್ ಬಂಧನಕ್ಕೆ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಮೇಕೆದಾಟು ಯೋಜನೆ ಕುರಿತು ಲೋಕಸಭೆಯಲ್ಲಿ ಭಾರಿ ಗದ್ದಲ; 26 ಸದಸ್ಯರನ್ನು ಅಮಾನತು ಮಾಡಿದ ಸ್ಪೀಕರ್‌