Select Your Language

Notifications

webdunia
webdunia
webdunia
webdunia

ಓಎನ್‍ಜಿಸಿ ಲಾಭದಲ್ಲಿ ಮೂರು ಪಟ್ಟು ವೃದ್ಧಿ

ಓಎನ್‍ಜಿಸಿ ಲಾಭದಲ್ಲಿ ಮೂರು ಪಟ್ಟು ವೃದ್ಧಿ
New Delhi , ಬುಧವಾರ, 1 ಫೆಬ್ರವರಿ 2017 (10:37 IST)
ತೈಲ ಬೆಲೆಗಳು ಗರಿಷ್ಠ ಮಟ್ಟಕ್ಕೆ ತಲುಪಿರುವ ಕಾರಣ ಓಎನ್‍ಜಿಸಿ ನಿವ್ವಳ ಲಾಭದಲ್ಲಿ ಏಕಾಏಕಿ ಮೂರು ಪಟ್ಟು ವೃದ್ಧಿಯಾಗಿದೆ. ಈ ಮೂಲಕ ರೂ.4,352 ಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಸಮಯಕ್ಕೆ ಕಂಪೆನಿ ನಿವ್ವಳ ಲಾಭ ರೂ.1,466 ಕೋಟಿ.
 
ಮೂರನೇ ತ್ರೈಮಾಸಿಕದಲ್ಲಿ ಒಟ್ಟು ವಹಿವಾಟು ಶೇ.9ರಷ್ಟು ಹೆಚ್ಚಳವಾಗಿ ರು.20,014 ಕೋಟಿಯಷ್ಟು ದಾಖಲಾಗಿದೆ. ಈ ಸಮಯದಲ್ಲಿ ತೈಲ ಉತ್ಪಾದನೆ ಶೇ.1.9ರಷ್ಟು ಕ್ಷೀಣಿಸಿ 64 ಲಕ್ಷ ಟನ್‌ಗಳಿಗೆ ತಲುಪಿದರೂ ಉತ್ಪಾದನೆ ಮಾಡಿದ ಪ್ರತಿ ಬ್ಯಾರೆಲ್‌ಗೆ 51.80 ಡಾಲರ್ ಓಎನ್‍ಜಿಸಿ ಗಳಿಸಿರುವುದು ವಿಶೇಷ. 
 
ಇದರ ಜತೆಗೆ ನೈಸರ್ಗಿಕ ಅನಿಲ ಉತ್ಪಾದನೆ ಮಾತ್ರ ಶೇ.4.4ರಷ್ಟು ಬೆಳವಣಿಗೆಯಾಗಿದೆ. ಈ ಮೂಲಕ 6.025 ಬಿಲಿಯನ್ ಕ್ಯೂಬಿಕ್ ಮೀಟರ್ ಗಳಿಗೆ ತಲುಪಿರುವುದು ವಿಶೇಷ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಡಿಕೇಟ್ ಬ್ಯಾಂಕ್ ಲಾಭ ರೂ.94 ಕೋಟಿ