Select Your Language

Notifications

webdunia
webdunia
webdunia
webdunia

ನೂತನ ವರ್ಷದ ಹೊಸ್ತಿಲಲ್ಲಿ ಹೊಸ ಐಷಾರಾಮಿ ಬೈಕ್‌ಗಳು ಮಾರುಕಟ್ಟೆಗೆ

ನೂತನ ವರ್ಷದ ಹೊಸ್ತಿಲಲ್ಲಿ ಹೊಸ ಐಷಾರಾಮಿ ಬೈಕ್‌ಗಳು ಮಾರುಕಟ್ಟೆಗೆ

ಗುರುಮೂರ್ತಿ

ಬೆಂಗಳೂರು , ಶುಕ್ರವಾರ, 15 ಡಿಸೆಂಬರ್ 2017 (17:22 IST)
ನೀವು ಹೊಸ ಬೈಕು ಕೊಳ್ಳಲು ಬಯಸಿದ್ದೀರಾ ಆಕರ್ಷಕ ವಿನ್ಯಾಸ, ಉತ್ತಮ ಸಾಮಥ್ಯದ ಬೈಕುಗಳ ಜೊತೆಗೆ ಉತ್ತಮ ದರದಲ್ಲಿ ನೀವು ಇಷ್ಟಪಟ್ಟ ಸ್ಪೋರ್ಟ್ಸ್ ಬೈಕ್ ನಿಮ್ಮದಾಗಬೇಕೇ ಇಲ್ಲಿದೆ ಕಿರು ಮಾಹಿತಿ.
 
ಇಂದು ವಾಹನ ತಯಾರಿಕಾ ಪ್ರಪಂಚ ತೀವ್ರಗತಿಯಲ್ಲಿ ಬೆಳೆಯುತ್ತಿದೆ ಅದಕ್ಕೆ ಕಾರಣ ಸಾವಿರಾರು. ಆದರೆ ಅಂತಿಮ ಕಾರಣ ಮಾತ್ರ ಗ್ರಾಹಕರನ್ನು ಸೆಳೆಯುವುದು. ಇಂದು ಮಾರುಕಟ್ಟೆಯಲ್ಲಿ ತುಂಬಾ ಪೈಪೋಟಿ ಇದ್ದು ಗ್ರಾಹಕರನ್ನು ಸೆಳೆಯುವುದೇ ಕಷ್ಟಕರವಾಗಿದೆ. ಹಾಗಾಗಿಯೇ ಕಂಪನಿಗಳು ತನ್ನ ಹಳೆಯ ಮಾದರಿಗಳನ್ನು ವಿನ್ಯಾಸಗೊಳಿಸಿ ಮುಂಬರುವ ವರ್ಷಕ್ಕೆ ಕೆಲವು ಬೈಕುಗಳನ್ನು ಗ್ರಾಹಕರ ಮುಂದಿಡುತ್ತಿದೆ.
 
ಹೀರೊ ಹೆಚ್‌ಎಕ್ಸ್ 250ಆರ್

ಭಾರತದಲ್ಲಿ ಅತೀ ದೊಡ್ಡ ದ್ವಿಚಕ್ರ ತಯಾರಿಕೆ ಸಂಸ್ಥೆಯಾದ ಹೀರೋ ಕಂಪನಿ ತನ್ನ ಬೆಲೆ ಹಾಗೂ ಮೈಲೇಜುಗಳಿಂದ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಅಗ್ರಸ್ಥಾನದಲ್ಲಿದೆ. ಇದು ತನ್ನ ಗ್ರಾಹಕರಿಗಾಗಿ ಹೊಸ ಹೊಸ ವಿನ್ಯಾಸವನ್ನು ಮಾರ್ಪಡಿಸುತ್ತಿದ್ದು 2018 ರ ವೇಳೆಗೆ ತನ್ನ ನೂತನ ದ್ವಿಚಕ್ರ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದು 249 ಸಿಸಿ, 4-ಸ್ಟ್ರೋಕ್, ಸಿಂಗಲ್ ಸಿಲೆಂಡರ್, DOHC, ಲಿಕ್ವಿಡ್ ಕೂಲ್‌ ಆಗುವ ಎಂಜಿನ್ ಅನ್ನು ಹೊಂದಿದ್ದು, ಗಂಟೆಗೆ 165 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ ಇದು 6 ಗೇರ್‌ಗಳನ್ನು ಹೊಂದಿದ್ದು 12.9 ಲೀಟರ್ ಪೆಟ್ರೋಲ್ ಟ್ಯಾಂಕ್ ಸೇರಿದಂತೆ ABS ಬ್ರೇಕ್ ವ್ಯವಸ್ಥೆಯನ್ನು ಹೊಂದಿದೆ. ಇದು 1145 ಮಿಮೀ ಎತ್ತರವಿದ್ದು 2085 ಮಿಮೀ ಉದ್ದವಿದೆ 139 KG ಭಾರವನ್ನು ಹೊಂದಿರುವ ಈ ಬೈಕ್ ಗ್ರೌಂಡ್ ಕ್ಲಿಯರೆನ್ಸ್ 145 ಮಿಮೀ ಇದ್ದು 31 bhp @ 9000 rpm ಶಕ್ತಿಯನ್ನು ಹೊಂದಿದೆ ತುಂಬಾ ಅತ್ಯುತ್ತಮವಾಗಿ ಈ ಬೈಕ್ ಅನ್ನು ವಿನ್ಯಾಸಪಡಿಸಲಾಗಿದೆ ಇದರ ಬೆಲೆ ರೂ. 1,50,000 ಎಂದು ಅಂದಾಜಿಸಲಾಗಿದೆ.
 
ಸುಜುಕಿ ಜಿಗ್ಸರ್ 250
webdunia
ಸ್ಪೋರ್ಟ್ ಬೈಕ್ ತಯಾರಿಕೆ ಕಂಪನಿ ಎಂಬ ಹೆಗ್ಗಳಿಕೆಗೆ ಖ್ಯಾತಿ ಹೊಂದಿರುವ ಸುಜುಕಿ ಕಂಪನಿಯು ತನ್ನ ನೂತನ ಬೈಕ್ ಅನ್ನು ಮಾರುಕಟ್ಟೆಗೆ ತರಲು ಮುಂದಾಗಿದೆ 2018 ಫೆಬ್ರುವರಿಯಲ್ಲಿ ಈ ಬೈಕ್ ಪರಿಚಯಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದು 250ಸಿಸಿ ಲಿಕ್ವಿಡ್-ಕೂಲ್‌, SOHC, ಪ್ಯಾರಲೆಲ್-ಟ್ವೀನ್ ಎಂಜಿನ್ ಹೊಂದಿದ್ದು ಲೀಟರಿಗೆ 30 ಕಿಮೀ ಮೈಲೇಜ್ ನೀಡುತ್ತದೆ. ಅಲ್ಲದೇ 6 ಗೇರ್‌ಗಳು ಇದರಲ್ಲಿದ್ದು 15 ಲೀ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ಇದು 1110 ಮಿಮೀ ಎತ್ತರವಿದ್ದು 2085 ಮಿಮೀ ಉದ್ದವಿದೆ 178 KG ಭಾರವನ್ನು ಹೊಂದಿರುವ ಈ ಬೈಕ್ ಗ್ರೌಂಡ್ ಕ್ಲಿಯರೆನ್ಸ್ 160 ಮಿಮೀ ಇದ್ದು 25 PS @ 8000 rpm ಶಕ್ತಿಯನ್ನು ಹೊಂದಿದೆ. ಇದರಲ್ಲಿ ಸೆಲ್ಪ್ ಸ್ಟಾರ್ಟ್ ಇದ್ದು ABS ಬ್ರೇಕ್ ವ್ಯವಸ್ಥೆಯನ್ನು ಇದು ಹೊಂದಿದೆ. ಇದರ ಬೆಲೆ ರೂ. 3,00,000 ಎಂದು ಅಂದಾಜಿಸಲಾಗಿದೆ.
 
ಯಮಹಾ ವೈಜೆಡ್ಎಫ್ R15 V3.0
webdunia
ಯಮಹಾ ತನ್ನ ವಿಭಿನ್ನ ವಿನ್ಯಾಸ ಮತ್ತು ವೇಗದಿಂದ ಗ್ರಾಹಕರ ಮನಸ್ಸನ್ನು ಗೆದ್ದಿರುವ ಸಂಸ್ಥೆ. ಇದೀಗ ತನ್ನ ಗ್ರಾಹಕರಿಗಾಗಿ ನೂತನವಾಗಿ ಹೊಸ ಮಾದರಿಯ ಯಮಹಾ ವೈಜೆಡ್ಎಫ್ R15 V3.0 ಮಾದರಿಯನ್ನು 2018 ರ ಮಾರ್ಚ್ ತಿಂಗಳು ಪರಿಚಯಿಸಲಿದೆ. ಇದು 149.8 ಸಿಸಿ ಎಂಜಿನ್ ಹೊಂದಿದ್ದು ವೇರಿಯೆಬಲ್ ವಾಲ್ಯು ಟೈಮಿಂಗ್ ತಂತ್ರಜ್ಞಾನದ ಜೊತೆಗೆ ಲಿಕ್ವಿಡ್ ಕೂಲ್ ಸಿಸ್ಟಂ ಅನ್ನು ಹೊಂದಿದೆ ಇದರಲ್ಲಿ 6 ಗೇರ್‌ಗಳು ಇರಲ್ಲಿದ್ದು 19 bhp ಶಕ್ತಿಯನ್ನು ಇದು ಹೊಂದಿದೆ. ಇದು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು  ಎಲ್ಇಡಿ ಹೆಡ್ ಲ್ಯಾಂಪ್‌ಗಳನ್ನು ಹೊಂದಿರುವುದರ ಜೊತೆಗೆ ಇದರ ಪೂರ್ಣ ವಿನ್ಯಾಸವು ಸ್ಪೋರ್ಟ್ಸ್ ಮಾದರಿಯಲ್ಲಿದ್ದು ಇದರ ಬ್ರೇಕ್ ಸಿಸ್ಟಂ ABS ಮತ್ತು CBS ಇವೆರಡರ ಆಯ್ಕೆಯನ್ನು ಇದು ಹೊಂದಿದೆ. ಇದರ ಬೆಲೆ ರೂ.1.48,411 ಎಂದು ಅಂದಾಜಿಸಲಾಗಿದೆ.
 
ಈ ಮೂರು ಬೈಕುಗಳು ಸದ್ಯಕ್ಕೆ ತುಂಬಾ ಕೂತುಹಲವನ್ನು ಕೆರಳಿಸಿದ್ದು ಯಾವ ರೀತಿಯಲ್ಲಿ ಸದ್ದು ಮಾಡುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯಾದಗಿರಿಯಲ್ಲಿ ಪ್ರಚೋದನಾಕಾರಿ ಭಾಷಣ: ತೆಲಂಗಾಣ ಶಾಸಕನ ವಿರುದ್ಧ ದೂರು ದಾಖಲು