Publish Date: Sat, 20 Jun 2020 (10:02 IST)
Updated Date: Sat, 20 Jun 2020 (10:04 IST)
ನವದೆಹಲಿ : ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್. ಸತತವಾಗಿ 14ನೇ ದಿನವೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ ಕೂಡ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 51ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 61ಪೈಸೆ ಹೆಚ್ಚಳವಾಗಿದೆ. ಅದರಂತೆ ಕೇವಲ 14ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 7.62ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 8.28ರೂ. ಹೆಚ್ಚಳವಾಗಿದೆ. ಈಗ ಪೆಟ್ರೋಲ್ ಲೀಟರ್ ಗೆ 78.31ರೂ. ಹಾಗೂ ಡೀಸೆಲ್ ಲೀಟರ್ ಒಂದಕ್ಕೆ 77.04ರೂ ಆಗಿದೆ.