Select Your Language

Notifications

webdunia
webdunia
webdunia
webdunia

ನೋಟ್ ಬ್ಯಾನ್ ಪರಿಣಾಮ: ಜಿಡಿಪಿ ಪ್ರಗತಿ ಶೇ.7.1ಕ್ಕೆ ಕುಸಿತ

Note Ban Effect
ನವದೆಹಲಿ , ಗುರುವಾರ, 1 ಜೂನ್ 2017 (08:44 IST)
ನವದೆಹಲಿ:ನೋಟು ರದ್ದತಿ ಪರಿಣಾಮ 2016–17ನೇ ಸಾಲಿನಲ್ಲಿ ದೇಶದ ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ತೀವ್ರವಾಗಿ ಕುಸಿದಿದ್ದು, ಶೇ 7.1ಕ್ಕೆ ಇಳಿಕೆ ಕಂಡಿದೆ. ನೋಟು ರದ್ದತಿ ಬಳಿಕ ಕೃಷಿ ವಲಯ ಹೊರತುಪಡಿಸಿ ಉಳಿದೆಲ್ಲಾ ವಲಯಗಳ ಪ್ರಗತಿ ಇಳಿಕೆ ಕಂಡಿದೆ ಎಂದು ಕೇಂದ್ರ ಅಂಕಿ-ಅಂಶ ಕಚೇರಿ ಮಾಹಿತಿ ನೀಡಿದೆ.
 
ದತ್ತಾಂಶದ ಪ್ರಕಾರ, ಕಳೆದ ತ್ತೈಮಾಸಿಕದಲ್ಲಿದ್ದ ಶೇ.7.0 ಜಿಡಿಪಿ ಜನವರಿ - ಮಾರ್ಚ್‌ ಅವಧಿಯಲ್ಲಿ ಶೇ. 6.1ಕ್ಕೆ ಕುಸಿದಿದೆ. ಈ ಮೂಲಕ 2016-17ನೇ ವಿತ್ತೀಯ ವರ್ಷದ ಜಿಡಿಪಿ ಶೇ.7.1ಕ್ಕೆ ತಲುಪಿದಂ ತಾಗಿದೆ. ಇದು ಕಳೆದ 3 ವರ್ಷಗಳಲ್ಲೇ ಜಿಡಿಪಿಯಲ್ಲಾದ ಅತ್ಯಧಿಕ ಇಳಿಕೆ. 2015 - 16ರಲ್ಲಿ ಇದು ಶೇ.8 ಮತ್ತು ಅದಕ್ಕಿಂತಲೂ ಮೊದಲ ವರ್ಷದಲ್ಲಿ ಶೇ.7.5 ಆಗಿತ್ತು.
 
ಮೂಲಸೌಲಭ್ಯಕ್ಕೆ ಪೂರಕವಾದ ಪ್ರಮುಖ 8 ವಲಯಗಳಲ್ಲಿಯೂ ಪ್ರಗತಿ ದರ ಇಳಿಮುಖವಾಗಿದೆ. ಎಪ್ರಿಲ್‌ನಲ್ಲಿ ಇದು ಶೇ. 2.5ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಲ್ಲಿ ದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ರಸಗೊಬ್ಬರ, ಉಕ್ಕು, ಸಿಮೆಂಟ್‌ವಲಯದ ಪ್ರಗತಿ ದರ ಶೇ. 8.7 ರಷ್ಟಿತ್ತು.
 
ಕೃಷಿ ವಲಯವು 2016–17ನೇ ಆರ್ಥಿಕ ವರ್ಷದಲ್ಲಿ ಶೇ 4.9ರಷ್ಟು ಪ್ರಗತಿ ಕಂಡಿದೆ. 2015–16ನೇ ಆರ್ಥಿಕ ವರ್ಷದಲ್ಲಿ ಶೇ 0.7 ರಷ್ಟಿತ್ತು.
 

Share this Story:

Follow Webdunia kannada

ಮುಂದಿನ ಸುದ್ದಿ

ಯುಪಿಎಸ್ಸಿ ಫಲಿತಾಂಶ ಪ್ರಕಟ: ಕರ್ನಾಟಕದ ಕೆ.ಆರ್. ನಂದಿನಿ ಟಾಪರ್