Select Your Language

Notifications

webdunia
webdunia
webdunia
webdunia

ಯುಪಿಎಸ್ಸಿ ಫಲಿತಾಂಶ ಪ್ರಕಟ: ಕರ್ನಾಟಕದ ಕೆ.ಆರ್. ನಂದಿನಿ ಟಾಪರ್

ಯುಪಿಎಸ್ಸಿ ಫಲಿತಾಂಶ ಪ್ರಕಟ: ಕರ್ನಾಟಕದ ಕೆ.ಆರ್. ನಂದಿನಿ ಟಾಪರ್
ನವದೆಹಲಿ , ಬುಧವಾರ, 31 ಮೇ 2017 (21:25 IST)
ನವದೆಹಲಿ: 2016ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕದ ಕೆ.ಆರ್. ನಂದಿನಿ ಅವರು ಟಾಪರ್ ಆಗಿ ಹೊರಹೊಮ್ಮಿದ್ದಾರೆ.
 
ಕೋಲಾರ ಮೂಲದ ನಂದಿನಿ ಅವರು ಕಳೆದ ಬಾರಿ ನಡೆದ ಯುಪಿಎಸ್ ಪರೀಕ್ಷೆ 625ನೇ ರ್ಯಾಂಕ್ ಪಡೆಯುವ ಮೂಲಕ ಐಆರ್ ಎಸ್ ಸೇವೆ ಆಯ್ಕೆ ಮಾಡಿಕೊಂಡಿದ್ದು, ಪ್ರಸ್ತುತ ಫರಿದಾಬಾದ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಎರಡನೇ ಪ್ರಯತ್ನದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
 
ಅನ್ಮೋಲ್​​ ಶೇರ್​ ಸಿಂಗ್ ಬೇಡಿ ಎರಡನೇ ಸ್ಥಾನ ಹಾಗೂ ಜಿ ರೋನಂಕಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಸೌಮ್ಯ ಪಾಂಡೆ ನಾಲ್ಕನೆ ಸ್ಥಾನ, ಅಭಿಲಾಶ್ ಮಿಶ್ರಾ ಐದನೇ ಸ್ಥಾನ ಪಡೆದಿದ್ದಾರೆ.
 
ಒಟ್ಟು 1099 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇನ್ನು 220 ಅಭ್ಯರ್ಥಿಗಳನ್ನು ಕಾಯ್ದಿರಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ವೈಗೆ ಎರಡು ನಾಲಿಗೆಯಿದೆ: ಸಿಎಂ ಸಿದ್ದರಾಮಯ್ಯ