Select Your Language

Notifications

webdunia
webdunia
webdunia
webdunia

ಅಜೀಂ ಪ್ರೇಮ್ ಜಿ ತಿರಸ್ಕಾರವೇ ನಾರಾಯಣ ಮೂರ್ತಿ ಇನ್ ಫೋಸಿಸ್ ಕಟ್ಟಲು ಕಾರಣ

Narayana Murthy

Krishnaveni K

ಬೆಂಗಳೂರು , ಭಾನುವಾರ, 14 ಜನವರಿ 2024 (13:48 IST)
ಬೆಂಗಳೂರು: ಭಾರತದ ಸಾಫ್ಟ್ ವೇರ್ ದೈತ್ಯ ಇನ್ ಫೋಸಿಸ್ ಸಂಸ್ಥೆ ಹುಟ್ಟುಹಾಕಲು ನಾರಾಯಣ ಮೂರ್ತಿಗೆ ಸ್ಪೂರ್ತಿಯಾಗಿದ್ದು, ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ ಜಿ ತಿರಸ್ಕಾರ. ಇದನ್ನು ಸಂದರ್ಶನವೊಂದರಲ್ಲಿ ನಾರಾಯಣ ಮೂರ್ತಿಗಳು ಮತ್ತೆ ಹೇಳಿಕೊಂಡಿದ್ದಾರೆ.

ಈ ಹಿಂದೆ ಅಜೀಂ ಪ್ರೇಮ್ ಜಿ ಸಂದರ್ಶನವೊಂದರಲ್ಲಿ ನನ್ನ ಜೀವನದ ಅತೀ ದೊಡ್ಡ ತಪ್ಪುಗಳಲ್ಲಿ ಒಂದು ಎಂದರೆ ನಾರಾಯಣ ಮೂರ್ತಿಯವರು ಕೆಲಸ ಕೇಳಿಕೊಂಡು ಬಂದಾಗ ಅವರನ್ನು ರಿಜೆಕ್ಟ್ ಮಾಡಿದ್ದು ಎಂದಿದ್ದರು.

ಇದನ್ನೀಗ ನಾರಾಯಣ ಮೂರ್ತಿಗಳೂ ಹೇಳಿಕೊಂಡಿದ್ದಾರೆ. ‘ಅಜೀಂ ಒಮ್ಮೆ ನನ್ನಲ್ಲಿ ಹೇಳಿಕೊಂಡಿದ್ದರು, ನಾನು ಮಾಡಿದ ದೊಡ್ಡ ತಪ್ಪು ಎಂದರೆ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳದೇ ಇದ್ದಿದ್ದು ಎಂದು. ಬಹುಶಃ ಆವತ್ತು ಅವರು ತಿರಸ್ಕರಿಸದೇ ಇದ್ದಿದ್ದರೆ ವಿಪ್ರೋ ಸಂಸ್ಥೆಗೆ ಪೈಪೋಟಿ ಕೊಡುವವರೂ ಇರುತ್ತಿರಲಿಲ್ಲ ಎಂದಿದ್ದರು’ ಎಂದು ನಾರಾಯಣ ಮೂರ್ತಿಗಳು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಆದರೆ ಆಗುವುದೆಲ್ಲಾ ಒಳ್ಳೆಯದಕ್ಕೇ ಎನ್ನುತ್ತಾರಲ್ಲ ಹಾಗೆಯೇ ಅಂದು ನಾರಾಯಣ ಮೂರ್ತಿಗಳನ್ನು ತಿರಸ್ಕರಿಸಿದ್ದಕ್ಕೇ ವಿಪ್ರೋದಂತಹ ದೊಡ್ಡ ಸಂಸ್ಥೆ ಸ್ಥಾಪಿಸಲು ಅವರಿಗೆ ಸ್ಪೂರ್ತಿ ಸಿಕ್ಕಿತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರಾ ಇಂದಿನಿಂದ ಶುರು