Select Your Language

Notifications

webdunia
webdunia
webdunia
webdunia

ಮೇ ತಿಂಗಳ ಬಳಿಕ ದುಬಾರಿಯಾಗಲಿದೆ ಮೊಬೈಲ್ ರಿಚಾರ್ಜ್

Telecom price

Krishnaveni K

ನವದೆಹಲಿ , ಗುರುವಾರ, 11 ಜನವರಿ 2024 (11:12 IST)
ನವದೆಹಲಿ: ಇದೇ ವರ್ಷ ಮೇ ತಿಂಗಳ ಬಳಿಕ ಮೊಬೈಲ್ ಬಳಕೆದಾರರಿಗೆ ಶಾಕ್ ಕಾದಿದೆ. ರಿಚಾರ್ಜ್ ದರಗಳಲ್ಲಿ ಭಾರೀ ಏರಿಕೆಯಾಗುವ ಸಾಧ‍್ಯತೆಯಿದೆ.

ಸದ್ಯಕ್ಕೆ ವೊಡಾಫೋನ್, ಐಡಿಯಾ ಸೇರಿದಂತೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ಸಂಕಷ್ಟದಲ್ಲಿವೆ. ಈ ಸಂಸ್ಥೆಗಳು ಚೇತರಿಸಿಕೊಳ್ಳಲು ದರ ಹೆಚ್ಚಳ ಅನಿವಾರ್ಯವಾಗಿದೆ.

ಹೀಗಾಗಿ ಲೋಕಸಭೆ ಚುನಾವಣೆ  ಬಳಿಕ ಟೆಲಿಕಾಂ ಸಂಸ್ಥೆಗಳು ಶೇ.20 ರಷ್ಟು ದರ ಏರಿಕೆ ಮಾಡುವ ಸಾಧ‍್ಯತೆಯಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಇಷ್ಟು ದಿನ ಅಗ್ಗದ ದರದಲ್ಲಿ ಸಿಗುತ್ತಿದ್ದ ನಿಮ್ಮ ಮೊಬೈಲ್ ರಿಚಾರ್ಜ್ ಇನ್ನು ಕೊಂಚ ದುಬಾರಿಯಾಗಬಹುದು.

ಕಾಲ ಕಾಲಕ್ಕೆ ಮೊಬೈಲ್ ರಿಚಾರ್ಜ್ ಟ್ಯಾರಿಫ್ ನಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಆದರೆ ಒಮ್ಮೆಲೇ ಶೇ. 20 ರಷ್ಟು ಬದಲಾವಣೆ ಎಂದರೆ ನಿಮ್ಮ ಜೇಬಿಗೆ ಕತ್ತರಿ ಬೀಲುವುದು ಗ್ಯಾರಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸೀಸನಲ್ ಹಿಂದೂ: ಅಯೋಧ್ಯೆಗೆ ಬರಲೊಪ್ಪದ ಕಾಂಗ್ರೆಸ್ ಗೆ ಕೇಂದ್ರ ಸಚಿವರ ಟೀಕೆ