Select Your Language

Notifications

webdunia
webdunia
webdunia
webdunia

ಪುತ್ರ ಅನಂತ್ ಅಂಬಾನಿ ಪ್ರಿವೆಡ್ಡಿಂಗ್ ನಲ್ಲಿ ತಾವೇ ಊಟ ಬಡಿಸಿದ ಮುಕೇಶ್ ಅಂಬಾನಿ

Anant Ambani wedding

Krishnaveni K

ಮುಂಬೈ , ಗುರುವಾರ, 29 ಫೆಬ್ರವರಿ 2024 (09:03 IST)
ಮುಂಬೈ: ರಿಲಯನ್ಸ್ ಮುಖ್ಯಸ್ಥ, ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ಪೂರ್ವ ಕಾರ್ಯಕ್ರಮ ಆರಂಭವಾಗಿದೆ. ಇದರ ಸಲುವಾಗಿ ಮುಕೇಶ್ ಕುಟುಂಬ ಸಾರ್ವಜನಿಕರಿಗೆ ಊಟ ಬಡಿಸಿದೆ.

ಮುಕೇಶ್ ಅಂಬಾನಿ ಕುಟುಂಬ ಮೊದಲಿನಿಂದಲೂ ಈ ಪದ್ಧತಿ ನಡೆಸಿಕೊಂಡು ಬರುತ್ತಿದೆ. ಸುಮಾರು 50 ಸಾವಿರ ಮಂದಿಗೆ ಅಂಬಾನಿ ಕುಟುಂಬ ಊಟೋಪಚಾರ ಮಾಡಿದೆ. ಸಾಂಪ್ರದಾಯಿಕ ಗುಜರಾತಿ ಶೈಲಿಯ ಊಟ ಉಣಬಡಿಸಲಾಗಿದೆ. ಖುದ್ದಾಗಿ ಅಂಬಾನಿ ಕುಟುಂಬದವರೇ ಈ ಊಟದ ವ್ಯವಸ್ಥೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.

webdunia
ಮದುವೆ ಪೂರ್ವ ಕಾರ್ಯಕ್ರಮದಿಂದ ಹಿಡಿದು ನಂತರ ಕೆಲವು ದಿನಗಳವರೆಗೆ ಸಾರ್ವಜನಿಕರಿಗೆ ಈ ಭೋಜನ ವ್ಯವಸ್ಥೆಯಿರಲಿದೆ. ಊಟದ ಬಳಿಕ ಪ್ರಸಿದ್ಧ  ಗುಜರಾತಿ ಗಾಯಕರಿಂದ ಮನರಂಜನೆ ಕಾರ್ಯಕ್ರಮವೂ ಏರ್ಪಾಡಾಗಿತ್ತು. ಸ್ಥಳೀಯರ ಆಶೀರ್ವಾದ ಪಡೆಯಲು ಅಂಬಾನಿ ಕುಟುಂಬ ಔತಣಕೂಟ ಏರ್ಪಡಿಸುತ್ತದೆ. ಇದಕ್ಕೆ ಮೊದಲು ಹಿರಿಯ ಪುತ್ರ ಆಕಾಶ್ ಅಂಬಾನಿ ವಿವಾಹ ಸಂದರ್ಭದಲ್ಲಿಯೂ ಅಂಬಾನಿ ಕುಟುಂಬ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿತ್ತು. ಆಗಲೂ ಖುದ್ದು ಅಂಬಾನಿ ಕುಟುಂಬವೇ ಊಟ ಬಡಿಸಿತ್ತು.

ಇಂದೂ ಕೂಡಾ ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಅವರ ಭಾವೀ ಪತ್ನಿ ರಾಧಿಕಾ ಮರ್ಚೆಂಟ್ ಅವರೇ ಖುದ್ದಾಗಿ ಅತಿಥಿಗಳಿಗೆ ಊಟ ಬಡಿಸಿದ್ದಾರೆ. ಪ್ರತಿಯೊಬ್ಬರ ಬಳಿ ಬಂದು ಅಂಬಾನಿ ಕೈ ಮುಗಿದು ಯೋಗ ಕ್ಷೇಮ ವಿಚಾರಿಸಿದ್ದಾರೆ. ಜುಲೈನಲ್ಲಿ ಅನಂತ್-ರಾಧಿಕಾ ಮದುವೆ ನಡೆಯಲಿದೆ. ಇದಕ್ಕೆ ಮೊದಲು ಮಾರ್ಚ್ 1 ರಿಂದ 3 ರವರೆಗೆ ಗುಜರಾತ್ ನ ಜಾಮ್ನಾನಗರದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ವಿರೋಧ