Webdunia - Bharat's app for daily news and videos

Install App

ಆರ್ಬಿಐ ಹೊಸ ರೂಲ್ಸ್ ಫಾಲೋ ಮಾಡದಿದ್ದರೆ ನಷ್ಟ ಗ್ಯಾರಂಟಿ..!

Webdunia
ಸೋಮವಾರ, 5 ಜುಲೈ 2021 (16:25 IST)
ನವ ದೆಹಲಿ : ಎಫ್ಡಿಗೆ ಸಂಬಂಧಿಸಿದ ನಿಯಮವಾಳಿಗಳನ್ನು ಆರ್ಬಿಐ ಬದಲಾಯಿಸಿದೆ. ಮೆಚ್ಯುರಿಟಿಯ ನಂತರವೂ ಎಫ್ಡಿಯನ್ನು ನೀವು ಪಡೆಯದೇ ಇದ್ದಲ್ಲಿ ಮತ್ತು ಹಣ ಬ್ಯಾಂಕ್ನಲ್ಲಿದ್ದರೆ ಉಳಿತಾಯಗಳ ಮೇಲಿನ ಬಡ್ಡಿಯ ನಷ್ಟವನ್ನು ಭರಿಸಬೇಕಾಗುತ್ತದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.

















ಗ್ರಾಹಕರು ಮುಕ್ತಾಯದ ಅವಧಿ ನಂತರವೂ ಎಫ್ಡಿ ಅನ್ನು ಕ್ಲೈಮ್ ಮಾಡದಿದ್ದರೆ ಸ್ಥಿರ ಠೇವಣಿಯ (ಫಿಕ್ಸೆಡ್ ಡಿಪಾಸಿಟ್) ನಿಯಮಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಬದಲಾಯಿಸಿದೆ. ಗ್ರಾಹಕರು ಕ್ಲೈಮ್ ಮಾಡದೇ ಇದ್ದರೆ ಉಳಿತಾಯದ ಮೇಲಿನ ಬಡ್ಡಿಯನ್ನು ಆಧರಿಸಿ ಅವರು ನಷ್ಟವನ್ನು ಭರಿಸಬೇಕಾಗುತ್ತದೆ ಎಂಬುದಾಗಿ ನಿಯಮಾವಳಿಯಲ್ಲಿ ತಿಳಿಸಲಾಗಿದೆ.ಸ್ಥಿರ ಠೇವಣಿಯಲ್ಲಿನ ನಿಯಮಾವಳಿಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಾಯಿಸಿದ್ದು ಮುಕ್ತಾಯದ ಅವಧಿ ನಂತರವೂ ಗ್ರಾಹಕರು ಎಫ್ಡಿಯನ್ನು ಕ್ಲೈಮ್ ಮಾಡದೇ ಇದ್ದರೆ ಉಳಿತಾಯದ ಮೇಲಿನ ಬಡ್ಡಿಯನ್ನು ಆಧರಿಸಿ ನಷ್ಟವನ್ನು ಭರಿಸಬೇಕಾಗುತ್ತದೆ ಎಂದಿದೆ. ಆದರೆ, ಟರ್ಮ್ ಡಿಪಾಸಿಟ್ ಪರಿಪಕ್ವಗೊಂಡ ನಂತರವೂ ವರಮಾನವನ್ನು ಪಾವತಿಸದೇ ಇದ್ದಲ್ಲಿ ಗ್ರಾಹಕರು ಬಡ್ಡಿಯನ್ನು ಗಳಿಸಬಹುದು ಎಂಬುದಾಗಿ ಬ್ಯಾಂಕ್ ತಿಳಿಸಿದೆ.
ಆರ್ಬಿಐ ನಿಯಮಗಳುಎಫ್ಡಿಗೆ ಸಂಬಂಧಿಸಿದ ನಿಯಮವಾಳಿಗಳನ್ನು ಆರ್ಬಿಐ ಬದಲಾಯಿಸಿದೆ. ಮೆಚ್ಯುರಿಟಿಯ ನಂತರವೂ ಎಫ್ಡಿಯನ್ನು ನೀವು ಪಡೆಯದೇ ಇದ್ದಲ್ಲಿ ಮತ್ತು ಹಣ ಬ್ಯಾಂಕ್ನಲ್ಲಿದ್ದರೆ ಉಳಿತಾಯಗಳ ಮೇಲಿನ ಬಡ್ಡಿಯ ನಷ್ಟವನ್ನು ಭರಿಸಬೇಕಾಗುತ್ತದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಎಫ್ಡಿ ಮೆಚ್ಯುರಿಟಿ
ಆರ್ಬಿಐ ತನ್ನ ಸರ್ಕ್ಯುಲರ್ ಒಂದರಲ್ಲಿ ತಿಳಿಸಿರುವಂತೆ ಎಫ್ಡಿ ಮೆಚ್ಯೂರ್ಗಳು ಹಾಗೂ ಅದರ ಪಾವತಿಗಳನ್ನು ಪಡೆದುಕೊಳ್ಳದೇ ಬ್ಯಾಂಕ್ನಲ್ಲಿದ್ದರೆ ಉಳಿತಾಯ ಖಾತೆಗಳು ಮತ್ತು ಮೆಚ್ಯೂರ್ ಆದ ಎಫ್ಡಿಗೆ ಅನುಗುಣವಾಗಿ ಬಡ್ಡಿದರವನ್ನು ವಿಧಿಸಲಾಗುತ್ತದೆ. ಒಪ್ಪಂದ ಬಡ್ಡಿಯು ಕಡಿಮೆ ಪ್ರಮಾಣದಲ್ಲಿ ಲಭ್ಯವಿದೆ.
ಆರ್ಬಿಐ ನಿಯಮಾವಳಿಗಳು
ಆರ್ಬಿಐ ತನ್ನ ನಿರ್ಧಾರವು ಎಲ್ಲಾ ಬ್ಯಾಂಕ್ಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದೆ. ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ನಗರ ಸಹಕಾರಿ ಬ್ಯಾಂಕುಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು, ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಈ ನಿಯಮಕ್ಕೆ ಒಳಪಟ್ಟಿವೆ ಎಂಬುದಾಗಿ ದೃಢೀಕರಿಸಿದೆ.
ಎಫ್ಡಿ ಹೂಡಿಕೆ
ಎಫ್ಡಿಯಲ್ಲಿ ಮೊತ್ತವನ್ನು ಪೂರ್ವನಿರ್ಧರಿತ ಸಮಯಕ್ಕೆ ಹೂಡಿಕೆ ಮಾಡಲಾಗುತ್ತದೆ. ಇತರೆ ಉಳಿತಾಯಗಳಿಗೆ ಹೋಲಿಸಿದಾಗ ಇದು ಸ್ವಲ್ಪ ಮಟ್ಟಿಗೆ ಉತ್ತಮ ಬಡ್ಡಿಯನ್ನು ಒದಗಿಸುತ್ತದೆ. 5 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲಾವಧಿಗಾಗಿ ಇದೇ ರೀತಿಯ ಹೂಡಿಕೆಯನ್ನು ಮಾಡಿದಲ್ಲಿ ತೆರಿಗೆ ಉಳಿತಾಯದ ಲಾಭ ಕೂಡ ನಿಮಗೆ ದೊರೆಯಲಿದೆ.

ಫಿಕ್ಸೆಡ್ ಡಿಪಾಸಿಟ್ಗಳು
ಫಿಕ್ಸೆಡ್ ಡಿಪಾಸಿಟ್ಗಳನ್ನು ಯಾವುದೇ ಬ್ಯಾಂಕ್ನಿಂದ ಪಡೆಯಬಹುದು ಅಥವಾ ಪೋಸ್ಟ್ ಆಫೀಸ್ನಲ್ಲಿ ಕೂಡ ಮಾಡಬಹುದು. ಎಫ್ಡಿಗಳಲ್ಲಿ ಹೂಡಿಕೆ ಮಾಡುವುದರಿಂದ ಲೋನ್ಗಳ ಪ್ರಯೋಜನವನ್ನು ಪಡೆಯಬಹುದು. ಆದರೆ ಈ ಸೌಲಭ್ಯವು ತೆರಿಗೆ ಉಳಿತಾಯ ಎಫ್ಡಿಗಳಿಗೆ ಲಭ್ಯವಿಲ್ಲ.
ಎಫ್ಡಿಯಲ್ಲಿ ಹೂಡಿಕೆ ಮಾಡುವುದರಿಂದ ಆರ್ಥಿಕ ಹಿಂಜರಿತದ ಸಮಯದಲ್ಲಿ ನಿಮಗೆ ಇದು ಸಹಕಾರಿಯಾಗಿದೆ. ಈ ಸಮಯದಲ್ಲಿ ದೀರ್ಘಾವಧಿ ಹೂಡಿಕೆ ಯೋಜನೆಗಳ ಮೇಲೆ ಹೂಡಿಕೆ ಮಾಡಿ. ಆದಷ್ಟು ಸಣ್ಣ ಹಣಕಾಸು ಬ್ಯಾಂಕ್ಗಳಲ್ಲಿ ಹೂಡಿಕೆ ಮಾಡುವುದು ಉತ್ತಮವಾಗಿದೆ. ಅದಾಗ್ಯೂ ಆರ್ಬಿಐ ನಿಯಮವಾಳಿಗಳಿಗೆ ಅನುಸಾರವಾಗಿ ಎಫ್ಡಿ ಮೆಚ್ಯೂರ್ ಆದ ನಂತರವೂ ಅದನ್ನು ಬ್ಯಾಂಕ್ನಲ್ಲಿರಿಸುವುದರಿಂದ ನೀವು ನಷ್ಟವನ್ನು ಭರಿಸುವುದು ಖಾತ್ರಿಯಾಗಿದೆ. ಹಾಗಾಗಿ ಈ ಕೂಡಲೇ ನಿಮ್ಮ ಎಫ್ಡಿಯನ್ನು ಕ್ಲೈಮ್ ಮಾಡಿ ಬಡ್ಡಿಯ ನಷ್ಟದಿಂದ ಪಾರಾಗಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments