Select Your Language

Notifications

webdunia
webdunia
webdunia
webdunia

ಏರ್‌ಟೆಲ್ ಪ್ಯಾಕೇಜ್ ನೋಡಿ ಬೆದರಿದ ರಿಲಯನ್ಸ್

ಏರ್‌ಟೆಲ್ ಪ್ಯಾಕೇಜ್ ನೋಡಿ ಬೆದರಿದ ರಿಲಯನ್ಸ್
ಬೆಂಗಳೂರು , ಮಂಗಳವಾರ, 19 ಜೂನ್ 2018 (14:30 IST)
ದೂರಸಂಪರ್ಕ ಕ್ಷೇತ್ರದಲ್ಲಿ ಉತ್ತಮ ಪ್ಲಾನ್‌ಗಳನ್ನು ನೀಡುವ ಮೂಲಕ ಎಲ್ಲರ ಮನೆಮಾತಾಗಿದ್ದ ರಿಲಯನ್ಸ್ ಒಡೆತನದ ಜಿಯೋಗೆ ಈಗ ಸರಿಯಾದ ಪೈಫೋಟಿ ನೀಡುವ ಮೂಲಕ ಏರ್‌ಟೆಲ್ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಸಂಚು ರೂಪಿಸಿದೆ
ಹೌದು ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆ ಬೆಲೆಗೆ ಡೇಟಾ ವಿತರಣೆ ಮತ್ತು ಅನಿಯಮಿತ ಕರೆಯ ಸೌಲಭ್ಯವನ್ನು 28 ದಿನಗಳವರೆಗೆ ನೀಡುವ ಮೂಲಕ ಹೆಸರು ಮಾಡಿದ್ದ ಜಿಯೋಗೆ ಏರ್‌ಟೆಲ್‌ನ ಹೊಸ ಆಫರ್ ಮತ್ತೆ ಕಂಗೆಡುವೆಂತೆ ಮಾಡಿದೆ.
 
ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಬಂಫರ್ ಆಫರ್ ಅನ್ನು ಘೋಷಿಸಿದೆ ಅದೇನೆಂದರೆ ತನ್ನ ಮೊದಲ 149 ಮತ್ತು 399 ರೂ. ಪ್ಯಾಕೇಜ್ ಅನ್ನು ಕೊಂಚ ಬದಲಾಯಿಸಿದ್ದು ರೂಪಾಯಿ 149 ಕ್ಕೆ 2 ಜಿಬಿ 3G/4G ಡೇಟಾ ಮತ್ತು 28 ದಿನಗಳವರೆಗೆ ವ್ಯಾಲಿಡಿಟಿಯನ್ನು ನೀಡಿದೆ. ಅಷ್ಟೇ ಅಲ್ಲ ತನ್ನ 399 ರೂಪಾಯಿ ಪ್ಯಾಕೇಜ್‌ನಲ್ಲೂ ಸಹ ಬದಲಾವಣೆ ಮಾಡಿದೆ. ಹಿಂದಿನ 399 ರ ಪ್ಲಾನ್‌ನಲ್ಲಿ ಕೇವಲ 1.4 ಜಿಬಿ ಡೇಟಾ ದೊರೆಯುತ್ತಿತ್ತು ಆದರೆ ಇದೀಗ ಅದನ್ನು 2.4 ಜಿಬಿವರೆಗೆ ವಿಸ್ತರಿಸಿದೆ ಮತ್ತು 84 ದಿನಗಳ ವ್ಯಾಲಿಡಿಟಿಯನ್ನು ನೀಡುವುದರ ಜೊತೆಗೆ ಅನಿಯಮಿತ ವಾಯ್ಸ್ ಕರೆ (ಸ್ಥಳಿಯ ಮತ್ತು ಎಸ್ಟಿಡಿ) ಅನ್ನು ನೀಡಿದೆ ಅದರ ಜೊತೆ ಜೊತೆಯಲ್ಲೇ ಪ್ರತಿದಿನ 100 ಎಸ್‌ಎಂಎಸ್‌ಗಳನ್ನು ಸಹ ಮಾಡಬಹುದು ಎಂದು ಏರ್‌ಟೆಲ್ ತಿಳಿಸಿದೆ.
 
ಒಟ್ಟಿನಲ್ಲಿ ಜಿಯೋದ 149 ಮತ್ತು 399 ಪ್ಲಾನ್‌ಗೆ ಸರಿಯಾದ ಟಕ್ಕರ್ ನೀಡುವ ಮೂಲಕ ಏರ್‌ಟೆಲ್ ಮತ್ತೊಮ್ಮೆ ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಯಾಗಿದೆ ಎಂದು ಹೇಳಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ರೂಪದೊಂದಿಗೆ ಲಗ್ಗೆ ಇಟ್ಟಿದೆ ಬಜಾಜ್ ಪಲ್ಸರ್ ಎನ್‌ಎಸ್200.