ಮುಂಬೈ: ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯದಲ್ಲಿ ಕಂಡುಬರುತ್ತಿರುವ ಬೆಳವಣಿಗೆ ಹಿನ್ನಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತವಾಗಿದೆ.
ಆರಂಭಕ ಹಂತದಲ್ಲಿ ಎನ್ ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವೆ ಹೆಚ್ಚಿನ ಅಂತರವಿಲ್ಲ. ಆರಂಭಿಕ ಹಂತದಲ್ಲಿ ಎನ್ ಡಿಎ 279 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಇಂಡಿಯಾ ಒಕ್ಕೂಟ 204 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಇತರರು 60 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಹೀಗಾಗಿ ಇದೀಗ ಒಂದು ರೀತಿಯ ಅತಂತ್ರ ಸ್ಥಿತಿಯ ಭೀತಿ ಕಂಡುಬರುತ್ತಿದೆ.
ಹೀಗಾಗಿ ಷೇರು ಮಾರುಕಟ್ಟೆಯ ಮೇಲೂ ಇದರ ಪರಿಣಾಮ ಬೀರಿದೆ. ನಿಫ್ಟಿ 22,665 ಅಂಕ ಕುಸಿತ ಕಂಡಿದೆ. ಎಕ್ಸಿಟ್ ಪೋಲ್ ಬಳಿಕ ಷೇರು ಮಾರುಕಟ್ಟೆ ಭಾರೀ ಏರಿಕೆ ಕಂಡಿತ್ತು. ಆದರೆ ಈಗ ಆರಂಭಿಕ ಹಂತದಲ್ಲಿ ಎನ್ ಡಿಎ ಇನ್ನೂ 300 ಕ್ರಾಸ್ ಆಗಿಲ್ಲ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಭಾರೀ ಹಿನ್ನಡೆ ಕಂಡುಬರುತ್ತಿದೆ.