ಲೆನೋವೋ ಸಂಸ್ಥೆಯ ಹೆಸರಾಂತ ಸ್ಮಾರ್ಟ್ಪೋನ್ ವೈಬ್ ಕೆ-5 ಆವೃತ್ತಿಯ ಸ್ಮಾರ್ಟ್ಪೋನ್ಗಳು ಬುಧವಾರ ಫ್ಲ್ಯಾಶ್ ಸೇಲ್ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ನಾಳೆ ಮುಂಜಾನೆ 11.59 ಗಂಟೆಗೆ ಅಮೆಜಾನ್ ಆನ್ಲೈನ್ ಮಾರುಕಟ್ಟೆಯಲ್ಲಿ ವೈಬ್ ಕೆ-5 ಆವೃತ್ತಿಯ ಸ್ಮಾರ್ಟ್ಪೋನ್ಗಳ ಫ್ಲ್ಯಾಶ್ ಸೇಲ್ ಆರಂಭವಾಗಲಿದ್ದು, ಈ ಆವೃತ್ತಿಯ ಪೋನ್ಗಳು ಗ್ರಾಹಕರಿಗೆ 6,999 ರೂಪಾಯಿಗಳಲ್ಲಿ ಲಭ್ಯವಾಗಲಿದೆ.
ವೈಬ್ ಕೆ-5 ಆವೃತ್ತಿಯ ಸ್ಮಾರ್ಟ್ಪೋನ್ಗಳು 64-ಬಿಟ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 415 ಆಕ್ಟಾ ಕೋರ್ ಸಿಪಿಯು, 720x1280 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 12.7 ಸಿಎಂ (5) ಎಚ್ಡಿ ಡಿಸ್ಪ್ಲೇ ಒಳಗೊಂಡಿದೆ.
ಈ ಹೊಸ ವೈಶಿಷ್ಟ್ಯದ ಸ್ಮಾರ್ಟ್ಪೋನ್ಗಳು ಅವಳಿ ಡಾಲ್ಬಿ ಅಟ್ಮೋಸ್ ವೈಶಿಷ್ಟ್ಯದ ಸ್ಪೀಕರ್ಗಳನ್ನು ಒಳಗೊಂಡಿದ್ದು, ಇದು ಬಳಕೆದಾರರಿಗೆ ವೀಡಿಯೊ ವೀಕ್ಷಿಸುವಾಗ ಮತ್ತು ಆಡಿಯೋ ಕೇಳುವಾಗ ಸ್ವಯಂಚಾಲಿತವಾಗಿ ಶಬ್ದ ಮತ್ತು ಧ್ವನಿ ವಿರೂಪವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಬಹುಕಾರ್ಯಕ ಸಾಮರ್ಥ್ಯ ಹೊಂದಿರುವ ವೈಬ್ ಕೆ-5 ಆವೃತ್ತಿಯ ಸ್ಮಾರ್ಟ್ಪೋನ್ಗಳು 2ಜಿಬಿ ಡಿಡಿಆರ್-3 ರ್ಯಾಮ್ ಜೊತೆಗೆ 64-ಬಿಟ್ ಕ್ವಾಲ್ಕಾಮ್ ಆಕ್ಟಾ ಕೋರ್ ಪ್ರೊಸೆಸರ್ ವೈಶಿಷ್ಟ್ಯವನ್ನು ಹೊಂದಿದೆ.
ಈ ಹೊಸ ವೈಶಿಷ್ಟ್ಯದ ಸ್ಮಾರ್ಟ್ಪೋನ್ಗಳು 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ವೈಶಿಷ್ಟ್ಯವನ್ನು ಹೊಂದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.