Select Your Language

Notifications

webdunia
webdunia
webdunia
webdunia

ಲೆನೊವೋ ಫ್ಯಾಬ್ 2 ಸ್ಮಾರ್ಟ್‌ಫೋನ್ ಬಿಡುಗಡೆ

ಲೆನೊವೋ ಫ್ಯಾಬ್ 2 ಸ್ಮಾರ್ಟ್‌ಫೋನ್ ಬಿಡುಗಡೆ
New Delhi , ಬುಧವಾರ, 7 ಡಿಸೆಂಬರ್ 2016 (09:01 IST)
ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನಗಳ ಸಂಸ್ಥೆ ಲೆನೊವೋ ಹೊಸ ಫ್ಯಾಬ್ 2 ಹೆಸರಿನ ಸ್ಮಾರ್ಟ್‌ಫೋನನ್ನು ಮಂಗಳವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.11,999 ಎಂದು ಕಂಪನಿ ಪ್ರಕಟಿಸಿದೆ. ಫ್ಲಿಪ್‌ಕಾರ್ಟ್ ಮೂಲಕ ಇದೇ ಶುಕ್ರವಾರದಿಂದ ಈ ಫೋನ್ ಲಭ್ಯವಾಗಲಿದೆ. 
 
ಎರಡು ಆಕರ್ಷಣೀಯ ಬಣ್ಣಗಳಲ್ಲಿ ಫ್ಯಾಬ್ 2 ಬಿಡುಗಡೆಯಾಗುತ್ತಿದೆ. ಆಂಡ್ರಾಯ್ಡ್ 6.0 ಆಪರೇಟಿಂಗ್ ಸಿಸ್ಟಂ ಇರುವ ಫ್ಯಾಬ್ ಇದಾಗಿದೆ. 225 ಗ್ರಾಂ ತೂಗುವ ಇದು 4G VoLTE ಸಪೋರ್ಟ್ ಮಾಡುತ್ತೆ. ಗೋಲ್ಡ್ ಮತ್ತು ಗನ್‌ಮೆಟಲ್ ಗ್ರೇ ಬಣ್ಣಗಳಲ್ಲಿ ಲಭ್ಯ.
 
ಈ ಫೋನಿನ ಗುಣವಿಶೇಷಣಗಳು ನೋಡುವುದಾದರೆ..
* 6.4 ಇಂಚಿನ ಟಚ್ ಸ್ಕ್ರೀನ್
* ಆಂಡ್ರಾಯ್ಡ್ 6.0 ಮಾರ್ಷ್‍ಮೆಲ್ಲೋ
* 1.3 ಗಿಗಾ ಹಡ್ಜ್ ಪ್ರೊಸೆಸರ್
* 3 ಜಿಬಿ ರ್ಯಾಮ್
* 32 ಜಿಬಿ ಆಂತರಿಕ ಮೆಮೊರಿ
* 13 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾ
* 5 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 4050 ಎಂಎಎಚ್ ಬ್ಯಾಟರಿ ಸಾಮರ್ಥ್ಯ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿವ್ಯಾಂಗ ಮಕ್ಕಳು ದೇವರ ಸಮಾನ ತಿಳಿಯಿರಿ