ಡಿಜಿಟಲ್ ಯುಗದಲ್ಲಿ ಎಲ್ಲವೂ ಸುಲಭವಾಗಿದೆ. ಇದೀಗ, ನೌಕರರ ಭವಿಷ್ಯ ನಿಧಿ ಬ್ಯಾಲೆನ್ಸ್ ಹಣವನ್ನು ತಿಳಿದುಕೊಳ್ಳಬೇಕಾದರೆ ಸಾಕಷ್ಟು ದಿನಗಳವರೆಗೂ ಕಾಯುವ ಅವಶ್ಯಕತೆ ಇಲ್ಲ. ಕೇವಲ ಒಂದು ಕ್ಲಿಕ್ ಮೂಲಕ ನಿಮ್ಮ ಬ್ಯಾಲೆನ್ಸ್ ಹಣವನ್ನು ತಿಳಿದುಕೊಳ್ಳಬಹುದು.
ಆನ್‌ಲೈನ್ ನೌಕರರ ಭವಿಷ್ಯ ನಿಧಿ ಖಾತೆಗಳನ್ನು ನವೀಕರಣಗೊಂಡಿದ್ದು, ಸುಲಭವಾಗಿ ವಸಾಹತು, ಬೆಳವಣಿಗೆ, ಟ್ರಾನ್ಸಫರ್ ಇನ್ ಮತ್ತು ಟ್ರಾನ್ಸಫರ್ ಔಟ್ ಕುರಿತು ತಿಳಿಯಬಹುದಾಗಿದೆ.
ಖಾತೆದಾರರು ಅಗತ್ಯ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ನೌಕರರ ಭವಿಷ್ಯ ನಿಧಿ ಕರಿತ ಎಲ್ಲಾ ವಿವರಗಳನ್ನು ಸುಲಭವಾಗಿ ತಿಳಿಯಬಹುದಾಗಿದೆ.
ಈ ಸುಲಭವಾದ ಹಂತಗಳನ್ನು ಅನುಸರಿಸಿ, ನೌಕರರ ಭವಿಷ್ಯ ನಿಧಿ ಮಾಹಿತಿಗಳನ್ನು ಪಡೆದುಕೊಳ್ಳಿ
ಮೊದಲು ಯುಎಎನ್ ಮೆಂಬರ್ ಪೋರ್ಟಲ್‌ಗೆ ಭೇಟಿ ನೀಡಿ.
ಖಾತೆಗೆ ಸೈನ್ ಇನ್ ಆಗಿ.
ನಿಮ್ಮ ಖಾತೆಯ ಮುಖಪುಟಕ್ಕೆ ತಲುಪಿದ ಮೇಲೆ ಪಾಸ್‌ಬುಕ್ ಮತ್ತು ಯುಎಎನ್ ಕಾರ್ಡ್‌ನ್ನು ಡೌನಲೋಡ್ ಮಾಡಿಕೊಳ್ಳಿ
ನೆನಪಿಡಿ! ಹೊಸ ಯುಎಎನ್ ಖಾತೆದಾರರರು ಲಾಗಿನ್ ಆದ ನಾಲ್ಕು ದಿನಗಳ ನಂತರ ಅಪ್‌ಡೇಟ್ ಪಾಸ್‌ಬುಕ್‌ನ ಮಾಹಿತಿ ಲಭಿಸುತ್ತದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.