Select Your Language

Notifications

webdunia
webdunia
webdunia
webdunia

ಫೊಟೋ ಕ್ಲಿಕ್ ಮಾಡಿದರೆ ಊಟ ಆರ್ಡರ್ ಮಾಡುತ್ತೆ!

ಫೊಟೋ ಕ್ಲಿಕ್ ಮಾಡಿದರೆ ಊಟ ಆರ್ಡರ್ ಮಾಡುತ್ತೆ!
New Delhi , ಮಂಗಳವಾರ, 27 ಡಿಸೆಂಬರ್ 2016 (08:34 IST)
ಪ್ರಮುಖ ಫಾಸ್ಟ್‌ಫುಡ್ ರೆಸ್ಟೋರೆಂಟ್ ಕೆಂಟಕಿ ಫ್ರೈಡ್ ಚಿಕಿನ್ (ಕೆಎಫ್‍ಸಿ) ಇತ್ತೀಚೆಗೆ ಆಧುನಿಕ ಶೈಲಿಯ ಒಂದು ಮಳಿಗೆಯನ್ನು ಪರಿಚಯಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ)ಟೆಕ್ನಾಲಜಿಯೊಂದಿಗೆ ಕೆಎಫ್‍ಸಿ ಶಾಖೆಯನ್ನು ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ತೆರೆದಿದೆ.
 
ಈ ಕೆಎಫ್‌ಸಿ ಮಳಿಕೆಯ ವಿಶೇಷತೆ ಏನೆಂದರೆ...ರೆಸ್ಟೋರೆಂಟ್ ಮುಂದಿನ ಮೆಷಿನ್ ಮುಂದೆ ನಿಂತು ಫೋಟೋ ತೆಗೆಸಿಕೊಂಡರೆ ಅದರಲ್ಲಿ ಗ್ರಾಹಕರ ಮುಖ, ವಯಸ್ಸು, ಹಾವಭಾವಗಳ ಆಧಾರದ ಮೇಲೆ ಅವರಿಗೆ ಯಾವ ರೀತಿಯ ಆಹಾರ ಇಷ್ಟವಾಗುತ್ತೆ ಎಂಬುದನ್ನು ತಿಳಿಸಿ ಅದೇ ಆರ್ಡರ್ ಮಾಡಿಬಿಡುತ್ತದೆ!
 
ಒಂದು ವೇಳೆ ಗ್ರಾಹಕ ಮತ್ತೆ ಬಂದು ಫೋಟೋ ಕ್ಲಿಕ್ಕಿಸಿಕೊಂಡರೆ ಈ ಹಿಂದೆ ಆರ್ಡರ್ ತೆಗೆದುಕೊಂಡಿದ್ದ ಪಟ್ಟಿಯನ್ನು ಮೆಷಿನ್ ತೋರಿಸುತ್ತದೆ. ಇದಿಷ್ಟೇ ಅಲ್ಲದೆ ಗ್ರಾಹಕರೊಬ್ಬರ ಆಹಾರ, ಅವರಿಗೆ ಏನಿಷ್ಟ ಎಂಬುದನ್ನು ಅವಲಂಬಿಸಿ ಶೀಘ್ರವಾಗಿ ಆರ್ಡರ್ ಮಾಡುತ್ತದೆ. 
 
ಈ ತರಹದ ಟೆಕ್ನಾಲಜಿ ತಯಾರಿಕೆಯಲ್ಲಿ ಚೀನಾದ ಅತಿದೊಡ್ಡ ಸರ್ಚ್ ಎಂಜಿನ್ ಬೈಡೂ ಇನ್‌ಕಾರ್ಪೊರೇಷನ್ ಸಂಸ್ಥೆ ಕೆಎಫ್‍ಸಿಗೆ ಸಹಕರಿಸಿದೆ. ಏಪ್ರಿಲ್‌ನಲ್ಲಿ ಕೆಎಫ್‌ಸಿ ಶಾಂಘೈನಲ್ಲಿ ಮೊದಲ ಸ್ಮಾರ್ಟ್ ರೆಸ್ಟೋರೆಂಟನ್ನು ಪ್ರಾರಂಭಿಸಿದೆ. ಈ ರೆಸ್ಟೋರೆಂಟ್ ರೋಬೋಟಿಕ್ ಟೆಕ್ನಾಲಜಿ ಮೂಲಕ ಕಾರ್ಯನಿರ್ವಹಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪ