Select Your Language

Notifications

webdunia
webdunia
webdunia
webdunia

ಜಾಗ್ವಾರ್ ಎಕ್ಸ್‌ಎಫ್ ಸೆಡಾನ್ ಬೆಲೆ ರೂ.47.50 ಲಕ್ಷ

ಜಾಗ್ವಾರ್ ಎಕ್ಸ್‌ಎಫ್ ಸೆಡಾನ್ ಬೆಲೆ ರೂ.47.50 ಲಕ್ಷ
New Delhi , ಶುಕ್ರವಾರ, 24 ಫೆಬ್ರವರಿ 2017 (12:43 IST)
ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) ಇಂಡಿಯಾ ದೇಶೀಯವಾಗಿ ತಯಾರಿಸಿರುವ ಎಕ್ಸ್ಎಫ್ ಸೆಡಾನ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.47.50 ಲಕ್ಷಗಳು (ಎಕ್ಸ್-ಶೋರೂಂ ದೆಹಲಿ). 2 ಲೀಟರ್ ಡೀಸೆಲ್, 2 ಲೀಟರ್ ಪೆಟ್ರೋಲ್ ಇಂಜಿನ್‌ಗಳೊಂದಿಗೆ ಇದು ಲಭ್ಯ.
 
ದೇಶೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ತಯಾರಿಸಲಾಗಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ವ್ಯವಸ್ಥಪಕಾ ನಿರ್ದೇಶಕ, ಅಧ್ಯಕ್ಷ ರೋಹಿತ್ ಸೂರಿ ತಿಳಿಸಿದ್ದಾರೆ. 2009ರಿಂದ ಜಾಗ್ವಾರ್ ಎಕ್ಸ್ಎಫ್‌ಗೆ ದೇಶೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದಿದ್ದಾರೆ.
 
ಇನ್‍ಕಂಟ್ರೋಲ್ ಟಚ್ ಪ್ರೋ, 25.9 ಸೆಂಟಿಮೀಟರ್‌ಗಳ ಟಚ್ ಸರ್ಕಿನ್ ಇನ್ಫೋಟೇನ್‌ಮೆಂಟ್, ಮೆರಿಡಿಯನ್ ಸೌಂಡ್ ಸಿಸ್ಟಂನಂತಹ ವಿಶೇಷಗಳು ಈ ಕಾರಿನಲ್ಲಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯದ್ಭುತ ವಿಶೇಷಗಳೊಂದಿಗೆ ಎಂಐ ಹೊಸ ಫೋನ್