ಬ್ರಿಟನ್ನ ಬೃಹತ್ ಕಾರು ತಯಾರಿಕೆ ಸಂಸ್ಥೆಯಾದ ಜಾಗ್ವಾರ್ ಲಾಂಡ್ ರೋವರ್, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಆಸಕ್ತಿ ತೋರಿದೆ ಎಂದು ಕಂಪೆನಿಯ ವಕ್ತಾರರು ಹೇಳಿದ್ದಾರೆ.
ಭಾರತೀಯ ಮಾಲೀಕತ್ವದ ಜಾಗ್ವಾರ್ ಸಂಸ್ಥೆ, ಕಳೆದ ವರ್ಷ 1.6 ಮಿಲಿಯನ್ ಕಾರುಗಳ ಉತ್ಪಾದಿಸಿದ್ದು, ಮೊದಲ ಬಾರಿಗೆ ಆಸ್ಟ್ರಿಯಾದಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಸಿದೆ. ಮುಂಬರುವ ದಿನಗಳಲ್ಲಿ ಬ್ರಿಟನ್ನಲ್ಲಿಯೇ ಕಾರುಗಳ ಉತ್ಪಾದನೆಗೆ ಸಿದ್ದತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಜಾಗ್ವಾರ್ ಸಂಸ್ಥೆ ಸೆಂಟ್ರಲ್ ಮತ್ತು ಉತ್ತರ ಇಂಗ್ಲೆಂಡ್ನಲ್ಲಿ ಮೂರು ಕಾರು ತಯಾರಿಕೆ ಘಟಕಗಳನ್ನು ಸ್ಥಾಪಿಸಿದ್ದು, ಬ್ರಿಟನ್ನಲ್ಲೂ ಕೂಡಾ ಕಾರು ಉತ್ಪಾದನೆ ಮಾಡಲಾಗುವುದು ಎಂದು ಮುಖ್ಯ ಕಾರ್ಯನಿರ್ವಾಹಕ ರಾಲ್ಫ್ ಸ್ಪೆಠ್ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ