Select Your Language

Notifications

webdunia
webdunia
webdunia
webdunia

ಕಡಿಮೆ ಹಾಜರಾತಿ ಹೊಂದಿದವರು ಮೋದಿಗೆ ಪ್ರಶ್ನೆ ಕೇಳ್ಬಾರ್ದು: ರಾಹುಲ್‌ಗೆ ಬಿಜೆಪಿ

ಕಡಿಮೆ ಹಾಜರಾತಿ ಹೊಂದಿದವರು ಮೋದಿಗೆ ಪ್ರಶ್ನೆ ಕೇಳ್ಬಾರ್ದು: ರಾಹುಲ್‌ಗೆ ಬಿಜೆಪಿ
ನವದೆಹಲಿ , ಶುಕ್ರವಾರ, 25 ನವೆಂಬರ್ 2016 (18:40 IST)
ನೋಟು ನಿಷೇಧ ಕುರಿತಂತೆ ಸಂಸತ್ತಿನಲ್ಲಿ ಮೌನವಹಿಸಿರುವ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಸಂಸತ್ತಿನಲ್ಲಿ ಅಲ್ಪ ಹಾಜರಾತಿ ಹೊಂದಿದವರು ಪ್ರಧಾನಿಗೆ ಪ್ರಶ್ನೆ ಕೇಳುವಂತಿಲ್ಲ ಎಂದು ತಿರುಗೇಟು ನೀಡಿದೆ.
 
ಲೋಕಸಭೆಯಲ್ಲಿ ಇತರ ಸಂಸದರು ಶೇ.90 ರಷ್ಟು ಹಾಜರಾತಿ ಹೊಂದಿರುವಾಗ ಶೇ.40 ರಷ್ಟು ಹಾಜರಾತಿ ಹೊಂದಿದ ಸಂಸದ ರಾಹುಲ್ ಗಾಂಧಿ, ಪ್ರಧಾನಿಗೆ ಪ್ರಶ್ನೆ ಕೇಳಲು ಬಯಸುತ್ತಾರೆ. ಅವರ ಹಾಜರಾತಿ ನೋಡಿದರೆ ಸಂಸತ್ತಿನ ಕಲಾಪಗಳ ಬಗ್ಗೆ ಅವರು ಎಷ್ಟು ಗಂಭೀರವಾಗಿದ್ದಾರೆ ಎನ್ನುವ ಅರಿವಾಗುತ್ತದೆ ಎಂದು ಬಿಜೆಪಿ ಮುಖಂಡ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.
 
ಕಾಂಗ್ರೆಸ್ ಪಕ್ಷ ಕೇವಲ ತಾನು ಬಡವರ ಪರವಾಗಿದ್ದೇನೆ ಎನ್ನುವುದನ್ನು ತೋರಿಸುವ ಪ್ರಯತ್ನದಲ್ಲಿದೆ. ಪ್ರಧಾನಿ ಮೋದಿಗೆ ಕೇಳುವ ಪ್ರಶ್ನೆಗಳ ಬಗ್ಗೆ ನನ್ನೊಂದಿಗೆ ಚರ್ಚೆ ನಡೆಸಲಿ ನಾನು ಉತ್ತರಿಸಲು ಸಿದ್ದನಿದ್ದೇನೆ ಎಂದು ಸವಾಲ್ ಹಾಕಿದರು.
 
ನೋಟ್ ಬ್ಯಾನ್ ನಿಷೇಧಕ್ಕೆ ಮುಂಚೆ ಪ್ರಧಾನಿ ಮೋದಿ ನಗುವಿನ ಅಲೆಯಲ್ಲಿದ್ದರು. ಇದೀಗ ಅಳುತ್ತಿದ್ದಾರೆ. ಅವರು ಸಂಸತ್ತಿಗೆ ಬಂದು ಮತ್ತೆ ಯಾವ ರೂಪ ತೋರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ ಎಂದು ರಾಹುಲ್ ಗಾಂಧಿ ಮೋದಿಗೆ ಟಾಂಗ್ ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನವೆಂಬರ್ 28 ರಂದು ಭಾರತ್ ಬಂದ್‌ಗೆ ನಮ್ಮ ಬೆಂಬಲವಿಲ್ಲ: ಸಿಎಂ ಸಿದ್ದರಾಮಯ್ಯ