Select Your Language

Notifications

webdunia
webdunia
webdunia
webdunia

ಹೊಸ ಐಆರ್‌ಸಿಟಿಸಿ ಆಪ್ ಬಿಡುಗಡೆ

ಹೊಸ ಐಆರ್‌ಸಿಟಿಸಿ ಆಪ್ ಬಿಡುಗಡೆ
New Delhi , ಬುಧವಾರ, 11 ಜನವರಿ 2017 (11:31 IST)
ರೈಲ್ವೆ ಪ್ರಯಾಣಿಕರಿಗೆ ಸುಲಭವಾಗಿ, ವೇಗವಾಗಿ ಟೆಕೆಟ್ ಬುಕ್ ಮಾಡಲು ಸಾಧ್ಯವಾಗುವಂತೆ ಭಾರತೀಯ ರೈಲ್ವೆ ಇಲಾಖೆ ಹೊಸ ವಿಶೇಷತೆಗಳೊಂದಿಗೆ ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಈ ಆಪ್‍ನ್ನು ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಏಕೀಕರಿಸಲಾಗಿದೆ. 
 
ಈ ಹೊಸ ಆಪ್ ಮೂಲಕ ತತ್ಕಾಲ್ ಟಿಕೆಟ್, ಮಹಿಳಾ ರಿಸರ್ವೇಷನ್, ಪ್ರೀಮಿಯಂ ತತ್ಕಾಲ್ ಕೋಟಾ ಬುಕ್ಕಿಂಗ್ ಮಾಡಿಕೊಳ್ಳಬಹುದು. ಕೂಡಲೆ ಆಸನಗಳನ್ನು ಮುಂಗಡ ಕಾದಿರಿಸಲು ಇದರಿಂದ ಸಾಧ್ಯವಾಗಲಿದೆ. ಅತ್ಯಾಧುನಿಕ ತಾಂತ್ರಿಕತೆಯೊಂದಿಗೆ ಈ ಆಪನ್ನು ಬಿಡುಗಡೆ ಮಾಡಲಾಗಿದೆ.
 
ಇ-ಟೆಕೆಟಿಂಗ್ ವಿಧಾನಕ್ಕೆ ಅನುಗುಣವಾಗಿ ಆಪ್ ರೂಪಿಸಲಾಗಿದೆ. ಮುಂದಿನ ಪ್ರಯಾಣದ ಬಗ್ಗೆ ಮಾಹಿತಿಯನ್ನು ಈ ಆಪ್ ತಿಳಿಸುತ್ತದೆ ಎಂದು ಐಆರ್‌‍ಸಿಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಇಷ್ಟು ದಿನಗಳ ಕಾಲ ಆಮೆ ವೇಗದಲ್ಲಿದ್ದ ರೈಲ್ವೆ ಇಲಾಖೆಗೆ ಈಗ ಹೊಸ ಶಕ್ತಿ ಬಂದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಭಾಷಣ ಕೇಳಿ ಮಾನಸಿಕ ಅಸ್ವಸ್ಥನಾದ ಉದ್ಯಮಿ