Select Your Language

Notifications

webdunia
webdunia
webdunia
webdunia

ಮೋದಿ ಭಾಷಣ ಕೇಳಿ ಮಾನಸಿಕ ಅಸ್ವಸ್ಥನಾದ ಉದ್ಯಮಿ

ಮೋದಿ ಭಾಷಣ ಕೇಳಿ ಮಾನಸಿಕ ಅಸ್ವಸ್ಥನಾದ ಉದ್ಯಮಿ
ಲಖನೌ , ಬುಧವಾರ, 11 ಜನವರಿ 2017 (10:49 IST)
ನವೆಂಬರ್ 8 ರ ರಾತ್ರಿ ಪ್ರಧಾನಿ ಮೋದಿಯಾಡಿದ ಒಂದು ಭಾಷಣ ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿತು. 500 ಮತ್ತು 1,000 ರೂಪಾಯಿ ಹಳೆಯ ನೋಟುಗಳ ನಿಷೇಧ ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿಯನ್ನು ನಿರ್ಮಿಸಿತು. ಮೋದಿ ಅವರ ಈ ದೃಢ ನಿರ್ಧಾರದಿಂದ ಎಷ್ಟೇ ಸಮಸ್ಯೆಗಳಾದರೂ ಸಾಮಾನ್ಯ ಭಾರತೀಯ ಸದುದ್ದೇಶಕ್ಕೆ ಕೈಗೊಂಡ ನಿರ್ಧಾರ ಎಂದು ಪ್ರಧಾನಿಯನ್ನೇ ಬೆಂಬಲಿಸಿದ. ಆದರೆ ವಿರೋಧ ಪಕ್ಷಗಳು ಬೀದಿಗಿಳಿದು ಈ ನಡೆಯನ್ನು ಹಿಂಪಡೆಯಬೇಕೆಂದು ಪ್ರತಿಭಟನೆ ನಡೆಸಿದವು.
 
ಅದೇನೇ ಇರಲಿ, ಮೋದಿ ಅವರ ಈ ನಿರ್ಧಾರ ದೊಡ್ಡ ದೊಡ್ಡ ಕಪ್ಪುಕುಳಗಳ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ. ಆತನಿಗಾಗಿದ್ದು ಅದೇ. 
 
ಉತ್ತರ ಪ್ರದೇಶದ ಲಖನೌ ನಿವಾಸಿ ಉದ್ಯಮಿಯೊಬ್ಬರು ಕಳೆದ ಎರಡು ತಿಂಗಳಿಂದ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಿದ್ದಾರೆ. ಹಸಿವೆಯನ್ನೇ ಮರೆತಿದ್ದಾರೆ. ಊಟ ರುಚಿಸುತ್ತಿಲ್ಲ. ರಾತ್ರಿ ಕೆಟ್ಟ ಕೆಟ್ಟ ಕನಸು, ನಿದ್ದೆಯೂ ಬರುತ್ತಿಲ್ಲ. ಅವರು ಎಲ್ಲೆಂದರಲ್ಲಿ ಸುತ್ತಾಡ ಹತ್ತಿದರು. ಕಾರಣ ಒಬ್ಬ ವಿಶೇಷ ವ್ಯಕ್ತಿಯ ಹೆಸರು, ಆತನ ಮಾತು ಕೇಳಿದ್ರೆ ಅವರಿಗೆ ಭಯವಾಗುತ್ತಿತ್ತು.
 
ಈ ಎಲ್ಲ ಸಮಸ್ಯೆಗಳಿಂದ ಬೇಸತ್ತ ಅವರು ಇತ್ತೀಚಿಗೆ ಲಖನೌನಲ್ಲಿರುವ ಮಾ ಕಮಲಾ ಹೆಲ್ತ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಮಾನಸಿಕ ಆರೋಗ್ಯದ ವೈದ್ಯರನ್ನು ಕಂಡರು. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಳಿದ ವೈದ್ಯ, ಅಶೋಕ್ ದಲಾಲ್ ಇದು ಮಾನಸಿಕ ಕಾಯಿಲೆಯ ಲಕ್ಷಣ ಎಂದು ಸ್ಪಷ್ಟ ಪಡಿಸಿದರು. 
 
ಅವರಲ್ಲಿ ಈ ಭಯವನ್ನು ಹುಟ್ಟಿಸಿರುವುದು ನವೆಂಬರ್ 8 ರಂದು ಮೋದಿ ಮಾಡಿರುವ ಭಾಷಣ. ಮೋದಿ ಭಾಷಣ ಕೇಳಿದಾಗಿನಿಂದ ಅದು ಅವರ ಕನಸಿನಲ್ಲೂ ಕಾಡುತ್ತಿದೆ. ಕಿವಿಯಲ್ಲಿ ಪ್ರತಿನಿಧಿಸುತ್ತದೆ. ಪೊಲೀಸರು ಬಂಧಿಸುವ ಭಯ ಆವರಿಸಿದೆ. ಮೋದಿ ಎಂದರೆ ಬೆಚ್ಚಿಬೀಳುವ ಅವರೀಗ ಈ ಸಮಸ್ಯೆಗೆ ಔಷಧಿ ಸೇವಿಸುತ್ತಿದ್ದಾರೆ. ನುರಿತ ಮನೋವೈದ್ಯರನ್ನು ಕಾಣುವಂತೆ ದಲಾಲ್ ಉದ್ಯಮಿಗೆ ಸೂಚಿಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸುವ ದಲಾಲ್ ಮೋದಿ ಭಯದಿಂದಲೇ ಅವರು ಹೀಗಾಗಿದ್ದಾರೆ. ಅವರಿಗೆ ಐದು ರೀತಿಯ ಔಷಧಿಗಳನ್ನು ನೀಡಲಾಗಿದೆ. ಮೊದಲನೆಯದು ಕೋಪ ಕಡಿಮೆಯಾಗಲು, ಎರಡನೆಯದು ಖಿನ್ನತೆಗೆ, ಮೂರನೆಯದು ಮಾನಸಿಕ ಸ್ಥಿಮಿತಕ್ಕೆ, ನಾಲ್ಕನೆಯದು ಸಾಮಾನ್ಯ ಗ್ಯಾಸ್ ಸಮಸ್ಯೆಗೆ ಮತ್ತು ಐದನೆಯದು ವಿಟಮಿನ್ ಮಾತ್ರೆ ಎಂದಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ವಿದಾಯ: ಒಬಾಮಾ ಭಾವುಕ ಭಾಷಣ