Select Your Language

Notifications

webdunia
webdunia
webdunia
webdunia

ಫ್ಲಿಪ್‍ಕಾರ್ಟ್‌ನಲ್ಲಿ ರೂ.9,900ಕ್ಕೆ ಆಪಲ್ ಐಫೋನ್!

ಫ್ಲಿಪ್‍ಕಾರ್ಟ್‌ನಲ್ಲಿ ರೂ.9,900ಕ್ಕೆ ಆಪಲ್ ಐಫೋನ್!
New Delhi , ಬುಧವಾರ, 4 ಜನವರಿ 2017 (12:43 IST)
ಜನಪ್ರಿಯ ಆನ್‌ಲೈನ್ ರಿಟೇಲರ್ ಫ್ಲಿಪ್‌ಕಾರ್ಟ್ ಆಪಲ್ ಐಫೋನ್‍ಗಳ ಮೇಲೆ ಭಾರಿ ರಿಯಾಯಿತಿ ಪ್ರಕಟಿಸಿದೆ. ಐಫೋನ್ 6, 16ಜಿಬಿ ಸಾಮರ್ಥ್ಯದ ಫೋನ್ ಮೆಲೆ ಸುಮಾರು ರೂ.22,000  ರಿಯಾಯಿತಿ ಕೊಡುತ್ತಿದ್ದು, ಕೇವಲ ರೂ.9,990ಕ್ಕೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದೆ.
 
ಹೊಸ ಐಫೋನ್ 6ಎಸ್‌ಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವವರಿಗೆ ಈ ಕೊಡುಗೆ ಲಭ್ಯವಾಗಲಿದೆ. ಎಕ್ಸಿಸ್ ಬ್ಯಾಂಕ್ ಮೂಲಕ ಇಎಂಐ ಆಯ್ಕೆ ಮಾಡಿಕೊಳ್ಳುವವರಿಗೆ ಬ್ಯಾಂಕ್‌ನಿಂದ ಶೇ.5ರಷ್ಟು ರಿಯಾಯಿತಿ ಕೊಡುತ್ತಿರುವುದಾಗಿ ಹೇಳಿದೆ.
 
ಎಕ್ಸೇಂಜ್ ಬೇಡ ಎನ್ನುವವರಿಗೆ ಮಾರಟ ಬೆಲೆ ಮೇಲೆ ಶೇ.13ರಷ್ಟು (ರೂ.5,000) ರಿಯಾಯಿತಿ ಪ್ರಕಟಿಸಿದೆ. ಒಟ್ಟಾರೆ ಐಫೋನ್ ಬೆಲೆ ಇಷ್ಟೊಂದು ಕಡಿಮೆಗೆ ಲಭ್ಯವಾಗುತ್ತಿರುವುದು ಇದೇ ಮೊದಲು ಎನ್ನುತ್ತಿದ್ದಾರೆ ಗ್ರಾಹಕರು. ಮುಂದಿನ ದಿನಗಳಲ್ಲಿ ಫ್ಲಿಪ್‌ಕಾರ್ಟ್ ಇನ್ನಷ್ಟು ರಿಯಾಯಿತಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಘನಘೋರ: ಒಂದೇ ಕುಟುಂಬದ 11 ಜನರನ್ನು ಕೊಂದವರ್ಯಾರು?