Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಮೊಬೈಲ್ ಡೇಟಾ ಸಂಚಾರದಲ್ಲಿ 15 ಪಟ್ಟು ಹೆಚ್ಚಳ ಸಾಧ್ಯತೆ

ಭಾರತದಲ್ಲಿ ಮೊಬೈಲ್ ಡೇಟಾ ಸಂಚಾರದಲ್ಲಿ 15 ಪಟ್ಟು ಹೆಚ್ಚಳ ಸಾಧ್ಯತೆ
ಮುಂಬೈ , ಬುಧವಾರ, 1 ಜೂನ್ 2016 (19:18 IST)
ಭಾರತದಲ್ಲಿ ಮೊಬೈಲ್ ಡೇಟಾ ಸಂಚಾರ ಅತೀ ವೇಗವಾಗಿ ಬೆಳೆಯುವ ನಿರೀಕ್ಷೆ ಇದ್ದು, 2021 ರ ವೇಳೆಗೆ 15 ಪಟ್ಟು ಹೆಚ್ಚಾಗಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸುತ್ತಿವೆ.
 
ಪ್ರಸಕ್ತ ಸಾಲಿನ ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ದೇಶದ ಮೊಬೈಲ್ ಚಂದಾದಾರರ ನಿವ್ವಳ ಸೇರ್ಪಡೆ 21 ಮಿಲಿಯನ್‌ಗೆ ತಲುಪಿದ್ದು, ನಂತರದಲ್ಲಿ ಮ್ಯಾನ್ಮಾರ್ ಮತ್ತು ಇಂಡೋನೇಷ್ಯಾ ತಲಾ 5 ಮಿಲಿಯನ್ ನಿವ್ವಳ ಸೇರ್ಪಡೆ ಹೊಂದಿದೆ. ಅಮೆರಿಕಾ ಮತ್ತು ಪಾಕಿಸ್ತಾನ ದೇಶಗಳು ನಿವ್ವಳ ಸೇರ್ಪಡೆ 3 ಮಿಲಿಯನ್‌ಗೆ ತಲುಪಿದೆ ಎಂದು ಸಂಶೋಧನೆ ವರದಿಗಳು ತಿಳಿಸುತ್ತಿವೆ.
 
2015 ರ ಸಾಲಿನಿಂದ 2021 ರ ಸಾಲಿನವರೆಗೂ ಇಂಟರ್‌ನೆಟ್ ಸಂಬಂಧಿತ 23 ಪ್ರತಿಶತ ಹೆಚ್ಚಳವಾಗಲಿದ್ದು, ಸೆಲ್ಯುಲರ್ ಅತೀ ಹೆಚ್ಚು ಬೆಳವಣಿಗೆ ಹೊಂದಲಿದೆ ಎಂದು ಅಂದಾಜಿಸಲಾಗಿದೆ.
 
2021 ರ ವೇಳೆಗೆ 28 ಬಿಲಿಯನ್ ಸಾಧನಗಳು ಅಂತರ್ಜಾಲ ಸಂಪರ್ಕ ಹೊಂದಲಿದ್ದು, 16 ಬಿಲಿಯನ್ ಎಲ್ಓಟಿ ಸಾಧನಗಳು ಸಂಪರ್ಕಕ್ಕೆ ಬರಲಿದೆ ಎಂದು ಸಂಶೋಧನಾ ವರದಿಗಳು ತಿಳಿಸುತ್ತಿವೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್‌ಜಿ ಸ್ಟೈಲಸ್ 2 ಪ್ಲಸ್ ಸ್ಮಾರ್ಟ್‌ಪೋನ್ ಮಾಡೆಲ್ ಮಾರುಕಟ್ಟೆಗೆ