ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಎಲ್‌ಜಿ, ಹೊಸ ಆವೃತ್ತಿಯ ಸ್ಟೈಲಸ್ 2 ಪ್ಲಸ್ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ತೈವಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಹೊಂದಿದ್ದವು. ಗ್ರಾಹಕರಿಗೆ ಸ್ಮಾರ್ಟ್‌ಪೋನ್‌ಗಳು 23,000 ರೂಪಾಯಿಗಳಲ್ಲಿ ಲಭ್ಯವಾಗಲಿದೆ.
ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಇಂದಿನಿಂದ ತೈವಾನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಂತೆ, ಏಷಿಯಾ, ದಕ್ಷಿಣ ಅಮೆರಿಕಾ, ಯುರೋಪ್ ಮತ್ತು ನಾರ್ಥ್ ಅಮೆರಿಕಾ ಮಾರುಕಟ್ಟೆಯಲ್ಲಿ ಮುದಿನ ವಾರದಿಂದ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಎಲ್‌ಜಿ ಸಂಸ್ಥೆ ತಿಳಿಸಿದೆ.
ಎಲ್‌ಜಿ ಸ್ಟೈಲಸ್ 2 ಪ್ಲಸ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 1080x1920 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 5.7 ಇಂಚಿನ ಸೆಲ್ ಡಿಸ್‌ಪ್ಲೇ ಹೊಂದಿದ್ದು, 1.4ಜಿಎಚ್‌ಝಡ್ ಆಕ್ಟಾ ಕೋರ್ ಪ್ರೊಸೆಸರ್ ವೈಶಿಷ್ಟ್ಯವನ್ನು ಹೊಂದಿದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.