ರಿಲಯನ್ಸ್ ಜಿಯೋನಿಂದ ಎದುರಾಗುತ್ತಿರುವ ಪೈಪೋಟಿಯನ್ನು ತಡೆದುಕೊಳ್ಳಲು ಎರಡು ಹೊಚ್ಚ ಹೊಸ ಆಫರ್‌ಗಳನ್ನು ಪರಿಚಯಿಸಿದೆ ಐಡಿಯಾ ಸೆಲ್ಯುಲಾರ್. ರೂ.148ಕ್ಕೆ ರೀಚಾರ್ಜ್ ಮಾಡಿಕೊಂಡರೆ ಐಡಿಯಾದಿಂದ ಐಡಿಯಾಗೆ ಲೋಕಲ್, ಎಸ್‌ಟಿಡಿ ಅನ್ ಲಿಮಿಟೆಡ್ ಕಾಲ್ಸ್ ಮಾಡಬಹುದು.
ಇದರ ಜೊತೆಗೆ 50 ಎಂಬಿ ಡಾಟಾ ಕೂಡ ಸಿಗಲಿದೆ. 4ಜಿ ಮೊಬೈಲ್ ಸೆಟ್ ಇದ್ದರೆ, ಉಚಿತ ವಾಯ್ಸ್ ಸೇವೆಗಳೊಂದಿಗೆ 300 ಎಂಬಿ ಡಾಟಾ ಸಿಗಲಿದೆ. ಇನ್ನೊಂದು ಪ್ಲಾನ್ ರೂ.348ಕ್ಕೆ ರೀಚಾರ್ಜ್ ಮಾಡಿಸಿದರೆ ಯಾವುದೇ ನೆಟ್‌ವರ್ಕ್‍ಗೆ ಬೇಕಾದರೂ ಅನ್‌ಲಿಮಿಟೆಡ್ ಕಾಲ್ಸ್ ಮಾಡಬಹುದು.
ಇದರ ಜೊತೆಗೆ 50 ಎಂಬಿ ಡಾಟಾ ಸಿಗಲಿದೆ. 4ಜಿ ಮೊಬೈಲ್ ಹ್ಯಾಂಡ್‌ಸೆಟ್ ಇರುವವರು 1 ಜಿಬಿ ಡಾಟ ಪಡೆಯಬಹುದು ಎಂದು ಐಡಿಯಾ ಸೆಲ್ಯುಲಾರ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ಎರಡು ಪ್ಲಾನ್‌ಗಳ ಕಾಲವಧಿ 28 ದಿನಗಳು. ಟೆಲಿಕಾಂ ಸರ್ಕಲ್‍ಗಳ ಆಧಾರದ ಮೇಲೆ ಬೆಲೆಗಳಲ್ಲಿ ಅತ್ಯಲ್ಪ ಬದಲಾವಣೆ ಇರುತ್ತದೆ ಎಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.