Select Your Language

Notifications

webdunia
webdunia
webdunia
webdunia

ವಿಆರ್ ಹೆಡ್ ಸೆಟ್ ಜೊತೆಗೆ ಅಲ್ಕಾಟೆಲ್ ಹೊಸ ಫೋನ್

ವಿಆರ್ ಹೆಡ್ ಸೆಟ್ ಜೊತೆಗೆ ಅಲ್ಕಾಟೆಲ್ ಹೊಸ ಫೋನ್
New Delhi , ಶುಕ್ರವಾರ, 9 ಡಿಸೆಂಬರ್ 2016 (12:30 IST)
ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಅಲ್ಕಾಟೆಲ್ ಐಡಲ್4 ಹೆಸರಿನ ಹೊಸ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫೋನ್ ಜೊತೆಗೆ ವಿಆರ್ ಹೆಡ್ ಸೆಟ್, ಜೆಬಿಎಲ್ ಈಯರ್‌ಫೋನನ್ನು ಉಚಿತವಾಗಿ ನೀಡುತ್ತಿದೆ. 
 
ಫ್ಲಿಪ್‍ಕಾರ್ಟಲ್ಲಿ ಇಂದಿನಿಂದ ಇದರ ಮಾರಾಟ ಪ್ರಕ್ರಿಯೆ ಆರಂಭವಾಗಿದೆ. ಇದರ ಬೆಲೆ ರೂ.16,999 ಎಂದು ಕಂಪನಿ ನಿರ್ಧರಿಸಿದೆ. ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ಗೆ ’ಬೂಮ್ ಕೀ’ ಹೆಸರಿನ ಬಟನ್ ಒಂದನ್ನು ಕಂಪನಿ ವಿಶೇಷವಾಗಿ ಕೊಟ್ಟಿದೆ. 
ಈ ಬಟನ್ ಮೂಲಕ ಒಂದೇ ಕ್ಲಿಕ್ ನಲ್ಲಿ ಕ್ಯಾಮೆರಾ, ಗ್ಯಾಲರಿ, ವಿಡಿಯೋ, ಗೇಮ್ಸ್‌ನ್ನು ಓಪನ್ ಮಾಡಲು ಸಾಧ್ಯವಾಗುತ್ತದೆ.
 
ಐಡಲ್4ರ ವಿಶೇಷಗಳು
* 5.2 ಇಂಚಿನ ಸ್ಪರ್ಶಿಸಬಹುದಾದ ತೆರೆ
* 1.2 ಗಿಗಾ ಹಡ್ಜ್ ಆಕ್ಟಾಕೋರ್ ಪ್ರೊಸೆಸರ್
* 8, 13 ಮೆಗಾ ಫಿಕ್ಸೆಲ್‍ನ ಮುಂಬದಿ, ಹಿಂಬದಿ ಕ್ಯಾಮೆರಾ
* 3 ಜಿಬಿ ರ್ಯಾಮ್
* ಆಂಡ್ರಾಯ್ಡ್ 6.0 ಮಾರ್ಷ್‌ಮಾಲೋ ಓಎಸ್
* 16 ಜಿಬಿ ಆಂತರಿಕ ಮೆಮೊರಿ (512 ಜಿಬಿ ವರೆಗೂ ವಿಸ್ತರಿಸಿಕೊಳ್ಳಬಹುದು)
* 2,610 ಎಂಎಎಚ್ ಬ್ಯಾಟರಿ ಸಾಮರ್ಥ್ಯ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವರ್ಷ ಪೇಟಿಎಂ ವ್ಯಾಪಾರ ರೂ.200 ಕೋಟಿ!