Webdunia - Bharat's app for daily news and videos

Install App

Pan 2.0: ಪ್ಯಾನ್ 2.0 ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ವಿವರ

Krishnaveni K
ಶನಿವಾರ, 30 ನವೆಂಬರ್ 2024 (09:13 IST)
Photo Credit: X
ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪ್ಯಾನ್ 2.0 ಕಾರ್ಡ್ ಹಿಂದಿನದ್ದಕ್ಕಿಂತಲೂ ಹೆಚ್ಚು ಸುಲಭ ನಿರ್ವಹಣೆ ಮತ್ತು ಸುರಕ್ಷತೆ ಹೊಂದಿದ್ದು ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ನೋಡಿ ವಿವರ.

ಪ್ಯಾನ್ 2.0 ಕಾರ್ಡ್ ಹೊಂದುವುದು ಕಡ್ಡಾಯವೇನೂ ಅಲ್ಲ. ಈಗಾಗಲೇ ಇರುವ ಪ್ಯಾನ್ ಕಾರ್ಡ್ ಗಳನ್ನು ಬದಲಾಯಿಸಬೇಕು ಎಂದೂ ನಿರ್ದೇಶನ ಬಂದಿಲ್ಲ. ಆದರೆ ಈಗ ಹೊಸದಾಗಿ ಪರಿಚಯಿಸಲಾಗಿರುವ ಪ್ಯಾನ್ ಕಾರ್ಡ್ ನಲ್ಲಿ ಕ್ಯೂ ಆರ್ ಕೋಡ್ ನೀಡಲಾಗುತ್ತದೆ. ಇದರಿಂದ ಸರ್ಕಾರ ಸುಲಭವಾಗಿ ಜನರ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಹೊಸ ಪ್ಯಾನ್ ಕಾರ್ಡ್ ನ್ನು ಈಮೇಲ್ ಮೂಲಕವೂ ಪಡೆದುಕೊಳ್ಳಬಹುದು. ಅರ್ಜಿ ಹಾಕುವುದು ಹೇಗೆ ಇಲ್ಲಿದೆ ವಿಧಾನ:

ಎನ್ ಎಸ್ ಡಿಎಲ್ ಇ-ಪೋರ್ಟಲ್ ಮೂಲಕ ಸಲ್ಲಿಸುವುದು ಹೇಗೆ

ಮೊದಲು ಎನ್ ಎಸ್ ಡಿಎಲ್ ಇ-ಪೋರ್ಟಲ್ https://www.onlineservices.nsdl.com/paam/endUserRegisterContact.html  ಗೆ ಭೇಟಿ ನೀಡಬೇಕು.
ಅಲ್ಲಿ ನಿಮ್ಮ ಪ್ಯಾನ್ ಕಾರ್ಡ್ ವಿವರ, ಹುಟ್ಟಿದ ದಿನಾಂಕ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ನೀಡಬೇಕು
ಈಗ ನಿಮ್ಮ ಮೊಬೈಲ್ ಗೆ ಒಟಿಪಿಯೊಂದು ಬರುತ್ತದೆ
30 ದಿನಗಳೊಳಗೆ 3 ಬಾರಿ ಪ್ಯಾನ್ ಗೆ ಮನವಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಅದಕ್ಕಿಂತ ಹೆಚ್ಚು ಬಾರಿಯಾದರೆ 8.26 ರೂ. ಫೀ ತೆರಬೇಕಾಗುತ್ತದೆ.
ಶುಲ್ಕ ಪಾವತಿ ನಂತರ ನಿಮ್ಮ ಈ ಮೇಲ್ ಗೆ 30 ನಿಮಿಷದ ಅವಧಿಯಲ್ಲಿ ಪ್ಯಾನ್ ಕಾರ್ಡ್ ಬರುತ್ತದೆ

ಒಂದು ವೇಳೆ ನಿಮಗೆ ಫಿಸಿಕಲ್ ಪ್ಯಾನ್ ಕಾರ್ಡ್ ಬೇಕೆಂದರೆ 50 ರೂ. ಶುಲ್ಕ ಪಾವತಿಸಿ ಡೆಲಿವರಿ ಮಾಡಬೇಕಾದ ಸರಿಯಾದ ವಿಳಾಸವನ್ನು ನೀಡಿ ಪ್ಯಾನ್ ಕಾರ್ಡ್ ಪಡೆಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments