ಕಳೆದ ತಿಂಗಳಷ್ಟೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕ್ರೀಡಾ ಬಳಕೆಯ ಹೊಂಡಾ ಬಿಆರ್-ವಿ ಆವೃತ್ತಿಯ ಕಾರುಗಳು ಮಾರಾಟ 10,000 ಮುಂಗಡ ಬುಕ್ಕಿಂಗ್ ಗಡಿ ದಾಟಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಕಳೆದ ಮೇ 5 ರಂದು ಮಾರುಕಟ್ಟೆಗೆ ಬಿಡುಗಡೆಯಾಗಿರುವ ಹೊಂಡಾ ಬಿಆರ್-ವಿ ಆವೃತ್ತಿಯ ಕಾರುಗಳು ಗ್ರಾಹಕರನ್ನು ವೈವಿಧ್ಯಮಯ ಪ್ರೊಫೈಲ್‌ನಿಂದ ಆಕರ್ಷಿಸುತ್ತಿದೆ ಎಂದು ಭಾರತೀಯ ಹೊಂಡಾ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಕಳೆದ ತಿಂಗಳಷ್ಟೇ ಮಾರುಕಟ್ಟೆಗೆ ಬಿಡುಗಡೆ ಹೊಂದಿರುವ ಈ ಕಾರುಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಇಲ್ಲಿಯವರೆಗೂ 10 ಸಾವಿರ ಮುಂಗಡ ಬುಕ್ಕಿಂಗ್ ಗಡಿದಾಟಿದೆ. ಈ ಆವೃತ್ತಿಯ ಕಾರುಗಳು ಯುವಕರನ್ನು ಮತ್ತು ಮಧ್ಯ ವಯಸ್ಕರನ್ನು ಆಕರ್ಷಿಸುತ್ತಿರುವ ಬಿಆರ್-ವಿ ಆವೃತ್ತಿಯ ಕಾರುಗಳು, ಇನ್ನೂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಎಚ್‌ಸಿಐಎಸ್ ಸಂಸ್ಥೆಯ ಅಧ್ಯಕ್ಷ ಯೊಇಚಿರೋ ಯಿನೋ ತಿಳಿಸಿದ್ದಾರೆ.
ಪ್ರಸಕ್ತ ಬೇಡಿಕೆಯ ಪ್ರಕಾರ, ಬಿಆರ್-ವಿ ಪೆಟ್ರೋಲ್ ಎಂಜಿನ್ ವಾಹನ ಮತ್ತು ಡಿಸೇಲ್ ಎಂಜಿನ್ ಆವೃತ್ತಿಯ ಕಾರುಗಳಿಗೂ ಸಮನಾದ ಬೇಡಿಕೆ ಇದೆ ಎಂದು ಸಂಸ್ಥೆ ತಿಳಿಸಿದೆ.
ಕ್ರೀಡಾ ಬಳಕೆಯ ಹೊಂಡಾ ಬಿಆರ್-ವಿ ಆವೃತ್ತಿಯ ಕಾರುಗಳು ಎಳು ಆಸನಗಳನ್ನು ಹೊಂದಿದ್ದು, ದೆಹಲಿ ಶೋ ರೂಮ್ ದರ ಹೊರತು ಪಡಿಸಿ ಗ್ರಾಹಕರಿಗೆ 8.75 ಲಕ್ಷ ರೂಪಾಯಿಗಳಿಂದ 12.9 ಲಕ್ಷ ರೂಪಾಯಿಗಳಲ್ಲಿ ಲಭ್ಯವಾಗಲಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.